ಫೆಬ್ರವರಿ 18 ರಂದು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ದೇಶದ ಬುಡಕಟ್ಟು ಪ್ರದೇಶದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಪಾಕಿಸ್ತಾನಕ್ಕೆ ಅಪೂರ್ವ ಅವಕಾಶವನ್ನು ಒದಗಿಸಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಡೈಲಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈರ್ವರು ರಕ್ಷಣಾ ತಂತ್ರಜ್ಞರ ಲೇಖನದಲ್ಲಿ ಆತಂಕವಾದದ ವಿರುದ್ದ ಸೇನಾ ಬಲದ ಪ್ರಯೋಗಕ್ಕೆ ಹಿನ್ನಡೆ ಉಂಟಾಗಿದೆ. ಸೇನಾ ಬಲದಿಂದ ಪಾಕಿಸ್ತಾನದ ವಝೀರಿಸ್ತಾನ ಮುಂತಾದ ಬುಡಕಟ್ಟು ಪ್ರದೇಶಗಳಲ್ಲಿ ಹಲವಾರು ಉಗ್ರರ ಬಂಧನ ಮತ್ತು ಅವರ ಅಡಗು ತಾಣಗಳನ್ನು ದ್ವಂಸಗೊಳಿಸಲಾಗಿದೆ. ಭಯೋತ್ಪಾದನೆ ವಿರುದ್ಧ ಸಾರಿರುವ ಸಮರದಲ್ಲಿ ಎರಡು ಅಂಶಗಳು ಇಲ್ಲ ಎಂದು ತಜ್ಞರು ಹೇಳಿದ್ದಾರೆ,
ಸೇನಾ ಕಾರ್ಯಾಚರಣೆಯಲ್ಲಿ ಸೈನಿಕರಿಗೆ ಉತ್ತೇಜನ ಮತ್ತು ನಾಯಕತ್ವದ ಗುಣಗಳು ಕಂಡು ಬರುತ್ತಿಲ್ಲ. ಅಲ್ಲದೇ ಪಾಕ್ ಮಿಲಿಟರಿ ಉನ್ನತ ಅಧಿಕಾರಿಗಳಿಗೂ ರಾಜಕೀಯ ವಲಯಗಳಿಂದ ಬೆಂಬಲ ಇಲ್ಲದಿರುವುದು ಭಯೋತ್ಪಾದನೆ ವಿರುದ್ಧ ಸಾರಿರುವ ಸಮರಕ್ಕೆ ಹಿನ್ನಡೆ ಉಂಟಾಗಲು ಕಾರಣ ಎಂದು ಅಂದಾಜಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ನಡೆದ ಹೋರಾಟ ಸಮಯದಲ್ಲಿ ರಾಜಕೀಯ ಮತ್ತು ಮಿಲಿಟರಿ ಶಕ್ತಿಗಳ ನಡುವೆ ಭಿನ್ನಾಭಿಪ್ರಾಯ ಇರುವುದು. ಜನ ಬೆಂಬಲಿತ ರಾಜಕೀಯ ಶಕ್ತಿಗಳ ತೀರ್ಮಾನಗಳು ಇಂತಹ ಸಂದರ್ಭಗಳಲ್ಲಿ ಮಹತ್ವ ಪಾತ್ರ ನಿರ್ವಹಿಸುತ್ತವೆ ಆದರೆ ರಾಜಕೀಯ ನಾಯಕರು ಭಯೋತ್ಪಾದನೆ ವಿರುದ್ಧ ಸಾರಿದ ಸಮರದಿಂದ ದೂರ ಉಳಿದಿದ್ದು ಮತ್ತಷ್ಟು ಪರಿಸ್ಥಿತಿಯನ್ನು ಹತೋಟಿಗೆ ತ
|