ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯರಿಗೆ ಪಾಕ್ ವೀಸಾ ನಿರಾಕರಣೆ
ಪ್ರಮುಖ ಭಾರತೀಯ ವಿದ್ವಾಂಸರಾದ ಇರ್ಫಾನ್ ಹಬೀಬ್, ಸುಭಾಷಿನಿ ಅಲಿ ಮತ್ತು ಸಯೀದ್ ನಕ್ವಿ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಲಾಗಿದ್ದು, ಕರಾಚಿಯ ವಿಶ್ವ ಸಾಮಾಜಿಕ ವೇದಿಕೆಯಲ್ಲಿ ಭಾಗವಹಿಸುವ ಸಂಭವವಿಲ್ಲ.

ಪಾಕಿಸ್ತಾನದ ಭೇಟಿಗೆ ಅನುಮತಿ ನಿರಾಕರಿಸಲಾದ 17 ಬುದ್ಧಿಜೀವಿಗಳ ಪೈಕಿ ಮೂವರು ಭಾರತೀಯರು ಸೇರಿದ್ದಾರೆಂದು ತಿಳಿದುಬಂದಿದೆ. ಫೆ.18ರಂದು ಸಂಸತ್ ಚುನಾವಣೆ ನಡೆದ ಬಳಿಕವೂ ಪಾಕಿಸ್ತಾನದಲ್ಲಿ ರಾಜಕೀಯ ವಾತಾವರಣ ಅನುಕೂಲಕರವಾಗಿಲ್ಲ ಎಂಬ ಕಾರಣದ ಮೇಲೆ ಅವರಿಗೆ ವೀಸಾ ನಿರಾಕರಿಸಿರುವುದಾಗಿ ಪಾಕಿಸ್ತಾನ ಪ್ರಾಯೋಜಕ ಸಮಿತಿಯ ವಕ್ತಾರ ಫಹಿಮುಜಾಮಾನ್ ಖಾನ್ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಅತಿಥಿಗಳನ್ನು ಸಾರ್ವಜನಿಕ ಅಸೆಂಬ್ಲಿ ಮತ್ತು ಪಶ್ಚಿಮ ಏಷ್ಯ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು. ಉದ್ದೇಶಿತ ಸಾರ್ವಜನಿಕ ಅಸೆಂಬ್ಲಿ ಮತ್ತು ಸಮಾವೇಶವು ಈ ವರ್ಷದ ಮಾರ್ಚ್‌ನಲ್ಲಿ ನಡೆಯುವ ಸಂಭವವಿದೆ.
ಮತ್ತಷ್ಟು
ಅಪೂರ್ವ ಅವಕಾಶ ತಂದಿತ್ತ ಚುನಾವಣಾ ಫಲಿತಾಂಶ
ನೇಪಾಳಗೆ ಚುನಾವಣೆ ಅವಶ್ಯ: ಲಿಕ್ಕಿನ್ ಜಿನ್
ಪಾಕಿಸ್ತಾನ್: ಆಜ್ ಟಿವಿ ಪ್ರಸಾರ ನಿಷೇದ
ಸೌಹಾರ್ಧಯುತ ಸಂಬಂಧದತ್ತ ಮುಷರಫ್ ಒಲವು
ಪಾಕ್ ಪ್ರಧಾನಿ ಹುದ್ದೆಗೆ ಅಮೀನ್ ಫಾಹಿಮ್ !
10ರ ಬಾಲಕನಿಗೆ ಐದು ಕೋಟಿ ಲಾಟರಿ!