ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಅಮೆರಿಕ ಆತ್ಮಿಯ ಸ್ನೇಹಿತರು : ಒಬಾಮ
ನೈಜ ಪಾಲುದಾರನಾದ ಭಾರತ ಜತೆಗಿನ ಮೈತ್ರಿಯನ್ನು ಸದೃಢಗೊಳಿಸುವ ಭರವಸೆ ನೀಡಿದ ಡೆಮಕ್ರೇಟಿಕ್ ಅಧ್ಯಕ್ಷೀಯ ಆಕಾಂಕ್ಷಿ ಬರಾಕ್ ಒಬಾಮ, ಕಠಿಣ ಪರಿಶ್ರಮಿಗಳಾದ ಭಾರತೀಯ ಅಮೆರಿಕ ವೃತ್ತಿಪರರು ಅಮೆರಿಕದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಗಳು ನೈಜ ಪಾಲುದಾರರಾಗಿದ್ದು, ಪ್ರಮುಖ ಹಿತಾಸಕ್ತಿ ಮತ್ತು ಮೂಲಭೂತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಂಚಿಕೊಳ್ಳುತ್ತಿದೆ ಎಂದು ಒಬಾಮ ಇನ್ನಷ್ಟೇ ಪ್ರಕಟಗೊಳ್ಳಲ್ಲಿರುವ ಪತ್ರಿಕೆಯೊಂದರ ಅಂಕಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದರ ಕೆಲವು ಆಯ್ದ ಭಾಗಗಳನ್ನು ನಿನ್ನೆ ಪರಿಚಯಿಸಲಾಗಿತ್ತು.

ಅಧ್ಯಕ್ಷೀಯ ಡೆಮಕ್ರೇಟ್ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಎದುರು ಮುನ್ನಡೆ ಸಾಧಿಸಿರುವ ಒಬಾಮ, ಅಮೆರಿಕ ಆರ್ಥಿಕತೆ ಹಾಗೂ ಅಮೆರಿಕ ಸಾಮಾಜ ರಚನೆಯಲ್ಲಿನ ಭಾರತೀಯ ಅಮೆರಿಕನ್ ಸಮುದಾಯದ ದೊಡ್ಡ ಕೊಡುಗೆಗಳನ್ನು ಗುರುತಿಸಿದ್ದಾರೆ.

ದೇಶದಲ್ಲಿನ ಸಮುದಾಯಗಳಲ್ಲಿ ಭಾರತೀಯ ಅಮೆರಿಕನ್ ಸಮುದಾಯ ಈಗಾಗಲೇ ತಮ್ಮ ಆರ್ಥಿಕತೆಯನ್ನು ಮೇಲಕ್ಕೆತ್ತುತ್ತಿದೆ ಮತ್ತು ಉದ್ಯೋಗ ಸೃಷ್ಟಿಸುತ್ತಿದೆ ಎಂದು ಹೇಳಿದ ಅವರು, ಮುಂಚೂಣಿಯಲ್ಲಿನ ವೃತ್ತಿಪರರು, ವಕೀಲರು, ವೈದ್ಯರು, ಇಂಜಿನಿಯರುಗಳು ಅಮೆರಿಕದ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ವೃದ್ಧಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಅಮೆರಿಕದಲ್ಲಿ ಬೆಳೆಯುತ್ತಿರುವ ಅಪರಾಧ ದ್ವೇಷದ ಬಗ್ಗೆ ಟೀಕಿಸಿದ ಒಬಾಮ, ನ್ಯೂನತೆಯ ನೀತಿಗಳಾದ ಜನಾಂಗೀಯ ವ್ಯಕ್ತಿಚಿತ್ರ ಯಾವತ್ತೂ ಭಾರತೀಯ-ಅಮೆರಿಕನ್ನರ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಪ್ರತಿಪಾದಿಸಿದ್ದಾರೆ.
ಮತ್ತಷ್ಟು
ಪಾಕ್: ಮುಷ್ ಬೆಂಬಲಿತ ಪಕ್ಷಗಳ ಸಭೆ
ಭಾರತೀಯರಿಗೆ ಪಾಕ್ ವೀಸಾ ನಿರಾಕರಣೆ
ಅಪೂರ್ವ ಅವಕಾಶ ತಂದಿತ್ತ ಚುನಾವಣಾ ಫಲಿತಾಂಶ
ನೇಪಾಳಗೆ ಚುನಾವಣೆ ಅವಶ್ಯ: ಲಿಕ್ಕಿನ್ ಜಿನ್
ಪಾಕಿಸ್ತಾನ್: ಆಜ್ ಟಿವಿ ಪ್ರಸಾರ ನಿಷೇದ
ಸೌಹಾರ್ಧಯುತ ಸಂಬಂಧದತ್ತ ಮುಷರಫ್ ಒಲವು