ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಅಧಿಕಾರದಿಂದ ಕೆಳಗಿಳಿಯುವುದು ಸೂಕ್ತ
ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್ ಬೆಂಬಲಿತ ಪಕ್ಷ ಸೋಲು ಅನುಭವಿಸಿರುವುದರಿಂದ ಮುಂಬರುವ ದಿನಗಳಲ್ಲಿ ಅವರು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟವಾಗಬಹುದು. ಆದ್ದರಿಂದ ಗೌರವಯುತವಾಗಿ ಅಧಿಕಾರದಿಂದ ಕೆಳಗೆ ಇಳಿಯುವುದು ಸೂಕ್ತ ಎಂದು ಅಮೆರಿಕದ ಹಿರಿಯ ಸೆನೆಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ವ್ಯವಹಾರ ಸಮಿತಿಯ ಮುಖ್ಯಸ್ಥರಾಗಿರುವ ಜೊಸೇಫ್ ಬಿಡೇನ್ ಅವರು ಇದೀಗ ಸೆನೆಟರ್ ಜಾನ್ ಕೆರ್ರಿ, ಮತ್ತು ಚಕ್ ಹೆಜೆಲ್ ಅವರೊಂದಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಚುನಾವಣೆಯಲ್ಲಿ ಮುಷರಫ್ ಬೆಂಬಲಿಗರಿಗೆ ಆಗಿರುವ ಸೋಲು ಆಲ್ ಖೈದಾ ವಿರುದ್ಧ ಪಾಕಿಸ್ತಾನದ ಸಹಯೋಗದಲ್ಲಿ ಅಮೆರಿಕ ಸಾರಿರುವ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಲಿದೆ ಎಂಬ ಅನಿಸಿಕೆಯನ್ನು ತಳ್ಳಿ ಹಾಕಿದ್ದಾರೆ.

ಎಬಿಸಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು. ಅಧಿಕಾರಕ್ಕೆ ಬಂದಿರುವ ವಿರೋಧ ಪಕ್ಷಗಳು ಹಳೆಯ ವೈಷಮ್ಯ ಸಾಧನೆಗೆ ಆಸಕ್ತಿ ತೋರಲಿಕ್ಕಿಲ್ಲ. ಪಾಕಿಸ್ತಾನ ಈಗಾಗಲೇ ಸಮಸ್ಯೆಗಳ ಮಹಾಪೂರದಲ್ಲಿ ಸಿಲುಕಿದೆ. ಆದ್ದರಿಂದ ಮುಷರಫ್ ಅಧಿಕಾರದಿಂದ ಕೆಳಗಿಳಿಯಲು ಸೂಕ್ತ ವೇದಿಕೆಯನ್ನು ನಿರ್ಮಿಸಿಕೊಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೆಲಿಗ್ರಾಫ್ ಪತ್ರಿಕೆಯಲ್ಲಿ ಮುಷರಫ್ ಅವರು ಅಧಿಕಾರದಿಂದ ಕೆಳಗಿಳಿಯುವುದಕ್ಕೆ ತಮ್ಮ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಮುಷರಫ್ ಅವರ ವಕ್ತಾರ ಮೇಜರ್ ಜನರಲ್ ರಷೀದ್ ಖುರೇಷಿ ಅವರು ಮುಷರಫ್ ಅಧಿಕಾರದಿಂದ ನಿವೃತ್ತಿಯಾಗುವುದಕ್ಕೆ ಯಾವುದೇ ವಿಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಭಾರತ-ಅಮೆರಿಕ ಆತ್ಮಿಯ ಸ್ನೇಹಿತರು : ಒಬಾಮ
ಪಾಕ್: ಮುಷ್ ಬೆಂಬಲಿತ ಪಕ್ಷಗಳ ಸಭೆ
ಭಾರತೀಯರಿಗೆ ಪಾಕ್ ವೀಸಾ ನಿರಾಕರಣೆ
ಅಪೂರ್ವ ಅವಕಾಶ ತಂದಿತ್ತ ಚುನಾವಣಾ ಫಲಿತಾಂಶ
ನೇಪಾಳಗೆ ಚುನಾವಣೆ ಅವಶ್ಯ: ಲಿಕ್ಕಿನ್ ಜಿನ್
ಪಾಕಿಸ್ತಾನ್: ಆಜ್ ಟಿವಿ ಪ್ರಸಾರ ನಿಷೇದ