ಕಳೆದ 50 ವರ್ಷಗಳ ಕಾಲ ಕ್ಯೂಬಾ ಎಂಬ ಪುಟ್ಟ ರಾಷ್ಟ್ರದ ಅಧಿಕಾರವನ್ನು ತನ್ನ ಭದ್ರಮುಷ್ಠಿಯಲ್ಲಿ ಇರಿಸಿಕೊಂಡಿದ್ದ ಫಿಡೆಲ್ ಕ್ಯಾಸ್ಟ್ರೋ ಅವರಿಂದ ಅಧ್ಯಕ್ಷೀಯ ಅಧಿಕಾವನ್ನು ಅವರ ಸಹೋದರ ರವುಲ್ ಕ್ಯಾಸ್ಟ್ರೋ ಸ್ವೀಕರಿಸಿದ್ದಾರೆ.
"ಫಿಡೆಲ್ ಅವರ ಸ್ಥಾನತುಂಬಲಾರದ್ದು, ಫಿಡೆಲ್ ಅವರು ದೈಹಿಕವಾಗಿ ನಮ್ಮೊಂದಿಗೆ ಆಡಳಿತದಲ್ಲಿ ಇಲ್ಲವಾದರೂ, ಅವರ ಆದರ್ಶಗಳೊಂದಿಗೆ ಜನತೆ ಕಾರ್ಯನಿರ್ವಹಿಸಲಿದ್ದಾರೆ" ಎಂದು 76ರ ಹರೆಯದ ರವುಲ್ ತನ್ನ ಅಧಿಕಾರ ಸ್ವೀಕಾರದ ವೇಳೆಗೆ ಮಾತನಾಡುತ್ತಾ ನುಡಿದರು.
ಫಿಡೆಲ್ ಎಂದಿದ್ದರೂ ಫಿಡೆಲ್ ಎಂಬುದಾಗಿ ನುಡಿದ ರವುಲ್, ಅವರ ಸ್ಥಾನ ತುಂಬುವುದು ಕಷ್ಟ ಎಂದು ನುಡಿದರು. ಕರುಳು ಸಂಬಂಧಿ ರೋಗದ ಸಮಸ್ಯೆಯಿಂದ ಬಳಲುತ್ತಿರುವ ಫಿಡೆಲ್ ಕ್ಯಾಸ್ಟ್ರೋ ಅವರು ತನ್ನ 50 ವರ್ಷಗಳ ಸುದೀರ್ಘ ಆಡಳಿತದಿಂದ ಹಿಂದೆ ಸರಿಯವುದಾಗಿ ಕಳೆದ ಮಂಗಳವಾರ ಹೇಳಿದ್ದರು. ಹೊಸ ನಾಯಕನ ಆಯ್ಕೆಯ ಈ ಐತಿಹಾಸಿಕ ಮೈಲಿಗಲ್ಲಿನ ರಾಷ್ಟ್ರೀಯ ಅಧಿವೇಶನದಲ್ಲಿ ಫಿಡೆಲ್ ಹಾಜರಿರಲಿಲ್ಲ.
ಶೀತಲ ಸಮರದ ಕೊನೆಯ ನಾಯಕರು ಫಿಡೆಲ್ ಅವರ ಉತ್ತರಾಧಿಕಾರಿಯ ಆಯ್ಕೆಯನ್ನು ಮೊಹರು ಮಾಡಿದ ಕವರಿನಲ್ಲಿ ಮತಹಾಕುವ ಮೂಲಕ ಆಯ್ಕೆ ಮಾಡಿದರು. ಹೊಸದಾಗಿ ಮರುಆಯ್ಕೆಯಾದ ಸ್ಪೀಕರ್ ರಿಕಾರ್ಡೋ ಅಲಾರ್ಕನ್ ಅಸ್ಸೆಂಬ್ಲಿಯಲ್ಲಿ ರವುಲ್ ಆಯ್ಕೆಯನ್ನು ಘೋಷಿಸಿದರು.
ಕಳೆದ ವರ್ಷ ಶಸ್ತ್ರಕ್ರಿಯೆಗೊಳಗಾದ ಫಿಡೆಲ್, ಈ ವೇಳೆ ಉಸ್ತುವಾರಿ ಅಧ್ಯಕ್ಷನಾಗಿ ತನ್ನ ಸಹೋದರನಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರ ಮಾಡಿದ್ದರು.
|