ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನ ಗಣಿ ದುರಂತ: ಮೂವರಿಗೆ ಜೀವಾವಧಿ
ಕ್ರೀಡಾಂಗಣವೊಂದರಲ್ಲಿ ನಡೆದ ವಿರಳ ಸಾರ್ವಜನಿಕ ವಿಚಾರಣೆಯಲ್ಲಿ ಕಳೆದ ವರ್ಷ ಸಂಭವಿಸಿರುವ ಕಲ್ಲಿದ್ದಲು ಗಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಅಧಿಕಾರಿಗಳು ಮತ್ತು ಗಣಿಗಾರಿಕಾ ಕಂಪೆನಿಯ ಹೂಡಿಕೆದಾರನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 105 ಮಂದಿಯ ಪ್ರಾಣಹರಣಕ್ಕೆ ಕಾರಣವಾದ ಈ ದುರಂತ ಪ್ರಕರಣದಲ್ಲಿ ಇತರ 13 ಮಂದಿಗೆ ವಿವಿಧ ಪ್ರಮಾಣದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಚೀನದ ಶಾಂಘ್ಸಿ ಪ್ರದೇಶದಲ್ಲಿ ನಡೆದಿದ್ದ ದುರಂತದ ವಿಚಾರಣೆ ನಡೆಸಿರುವ ಲಿಂಫೆನ್ ಸಿಟಿಯಲ್ಲಿನ ನ್ಯಾಯಾಲಯವು ಕಂಪೆನಿಯ ಕಾನೂನು ಪ್ರತಿನಿಧಿ, ಪ್ರಬಂಧಕ, ಹಾಗೂ ಹೂಡಿಕೆದಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಇತರ 13 ಮಂದಿಗೆ ಒಂದರಿಂದ 20 ವರ್ಷದ ತನಕ ವಿವಿಧ ಪ್ರಮಾಣದ ಸಜೆ ವಿಧಿಸಿದೆ.

ಕಂಪೆನಿಯು ಒಂದು ವರ್ಷದ ಉತ್ಪಾದನಾ ಸಾಮರ್ಥ್ಯಕ್ಕಿಂತ ಹೆಚ್ಚು ಗಣಿಗಾರಿಕೆ ಮಾಡಿತ್ತು, ಮತ್ತು ಕಾನೂನು ಬಾಹಿರವಾಗಿ ಮತ್ತೊಂದು ಗಣಿಗಾರಿಕೆಯಲ್ಲಿ ತೊಡಗಿತ್ತು ಎಂದು ನ್ಯಾಯಾಲಯ ದೂರಿದೆ. ಈ ಎರಡು ಗಣಿಗಳನ್ನು ಸಂಪರ್ಕಿಸುವ ರಹಸ್ಯ ಸಂಪರ್ಕದಾರಿಯನ್ನೂ ಸಹ ಕಂಪೆನಿಯು ನಿರ್ಮಿಸಿತ್ತು ಎಂದು ಘ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮತ್ತಷ್ಟು
ಕ್ಯೂಬಾ: ರವುಲ್ ಅಧಿಕಾರ ಸ್ವೀಕಾರ
ಮುಷರಫ್ ಅಧಿಕಾರದಿಂದ ಕೆಳಗಿಳಿಯುವುದು ಸೂಕ್ತ
ಭಾರತ-ಅಮೆರಿಕ ಆತ್ಮಿಯ ಸ್ನೇಹಿತರು : ಒಬಾಮ
ಪಾಕ್: ಮುಷ್ ಬೆಂಬಲಿತ ಪಕ್ಷಗಳ ಸಭೆ
ಭಾರತೀಯರಿಗೆ ಪಾಕ್ ವೀಸಾ ನಿರಾಕರಣೆ
ಅಪೂರ್ವ ಅವಕಾಶ ತಂದಿತ್ತ ಚುನಾವಣಾ ಫಲಿತಾಂಶ