ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿರುವ ಸಂಸದೀಯ ಚುನಾವಣೆಯು ನೀಡಿರುವ ಫಲಿತಾಂಶಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಶರಫ್ ತಾನಾಗೇ 'ವಿನಯದಿಂದ ಸ್ಥಾನ ತೊರೆಯುವುದೊಳಿತು' ಎಂದು ಅಮೆರಿಕದ ಪ್ರಮುಖ ಸೆನೆಟರ್‌ಗಳಿಬ್ಬರು ಹೇಳಿದ್ದಾರೆ.
ನಾನವರ ರಾಜಕೀಯ ಸಲಹೆಗಾರನಾಗಿರುತ್ತಿದ್ದರೆ, ಇದನ್ನೆ ಹೇಳುತ್ತಿದ್ದೆ ಎಂಬುದಾಗಿ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜೋಸೆಫ್ ಬಿಡೆನ್ ಹೇಳಿದ್ದಾರೆ. ಮುಶರಫ್ ಸ್ಥಾನ ತ್ಯಜಿಸಲು ಇದು ಸಕಾಲವೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಹೀಗೆಂದು ಅಭಿಪ್ರಾಯಿಸಿದ್ದಾರೆ.
ಮುಶರಫ್ ಅವರ ನಿಕಟವರ್ತಿಯೊಬ್ಬರು ಲಂಡನ್ ಟೆಲಿಗ್ರಾಫ್‌ಗೆ ನೀಡಿರುವ ಸಂದರ್ಶನದಲ್ಲಿ ಮುಶರಫ್ ಸ್ಥಾನ ತೊರೆಯುವ ಕುರಿತು ಯೋಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮುಶರಫ್ ಈ ಕುರಿತು ಯೋಚಿಸುತ್ತಿಲ್ಲ ಎಂದು ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ. ಏತಮ್ಮಧ್ಯೆ ಮುಶರಫ್ ಅವರನ್ನು ಅತ್ಯಂತ ಕೆಟ್ಟದಾಗಿ, ಕಟುವಾಗಿ ನಡೆಸಿಕೊಳ್ಳಬಾರದು ಎಂದು ಟೆಕ್ಸಾಸಿನ ಸೆನೆಟರ್ ಹೇಳಿದ್ದಾರೆ.
|