ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಸ್ಫೋಟಕ್ಕೆ ಮೇಜರ್ ಜನರಲ್ ಆಹುತಿ
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಆತ್ಮಾಹುತಿ ಬಾಂಬರ್ ನಡೆಸಿರುವ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನ ವೈದ್ಯಕೀಯ ಸೇವೆಗಳ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿ ಹಾಗೂ ಇತರ ಆರುಮಂದಿ ಸಾವನ್ನಪ್ಪಿದ್ದು, ಇತರ 29 ಮಂದಿ ಗಾಯಗೊಂಡಿದ್ದಾರೆ. ಇದು ಈ ತಿಂಗಳಲ್ಲಿ ಸೇನಾ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಸುತ್ತಿರುವ ದ್ವಿತೀಯ ದಾಳಿಯಾಗಿದೆ.

ಸೇನಾ ವೈದ್ಯಕೀಯ ಸೇವೆಗಳ ಪ್ರಧಾನ ನಿರ್ದೇಶಕ ಮುಸ್ತಾಕ್ ಆಹ್ಮದ್ ಬೈಗ್ ಅವರ ಕಾರಿನ ಸಮೀಪ ದುಷ್ಕರ್ಮಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಸೇನಾಮುಖ್ಯ ಕಚೇರಿಗೆ ಅತ್ಯಂತ ಸಮೀಪದಲ್ಲೇ ಈ ದಾಳಿಯನ್ನು ಸೋಮವಾರ ಅಪರಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ನಡೆಸಲಾಗಿದೆ. ಬೈಗ್, ಅವರ ಕಾರು ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಸ್ಫೋಟದಲ್ಲಿ ಮೃತರಾಗಿರುವುದಾಗಿ ಡಾನ್ ಸುದ್ದಿವಾಹಿನಿ ವರದಿ ಮಾಡಿದೆ.

ಸ್ಫೋಟದ ಸ್ಥಳದಲ್ಲಿ ಎಲ್ಲೆಂದರಲ್ಲಿ ಮಾನವ ದೇಹದ ಅಂಗಾಂಗಳು ಚದುರಿ ಬಿದ್ದಿದ್ದು, ರಕ್ತದ ಖೋಡಿ ಹರಿದಿತ್ತು. ಪ್ರದೇಶವನ್ನು ತಕ್ಷಣ ಸೇನಾ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.

ರಾವಲ್ಪಿಂಡಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆಸಿರುವ ಈ ಶಕ್ತಿಶಾಲಿ ಸ್ಫೋಟದಲ್ಲಿ ಕನಿಷ್ಠ ಹತ್ತುವಾಹನಗಳು ಜಖಂಗೊಂಡಿದ್ದು, ಹಲವಾರು ಅಂಗಡಿಗಳಿಗೆ ಹಾನಿಯಾಗಿದೆ.
ಮತ್ತಷ್ಟು
ಮುಶರಫ್ 'ಮರ್ಯಾದೆಯಿಂದ' ಸ್ಥಾನ ತೊರೆಯಲಿ
ಚೀನ ಗಣಿ ದುರಂತ: ಮೂವರಿಗೆ ಜೀವಾವಧಿ
ಕ್ಯೂಬಾ: ರವುಲ್ ಅಧಿಕಾರ ಸ್ವೀಕಾರ
ಮುಷರಫ್ ಅಧಿಕಾರದಿಂದ ಕೆಳಗಿಳಿಯುವುದು ಸೂಕ್ತ
ಭಾರತ-ಅಮೆರಿಕ ಆತ್ಮಿಯ ಸ್ನೇಹಿತರು : ಒಬಾಮ
ಪಾಕ್: ಮುಷ್ ಬೆಂಬಲಿತ ಪಕ್ಷಗಳ ಸಭೆ