ಹೆಚ್ಚು ವೇತನಕ್ಕೆ ಒತ್ತಾಯಿಸಿ ಹಿಂಸಾಚಾರದ ಪ್ರತಿಭಟನೆ ನಡೆಸಿದ 45ಮಂದಿ ಭಾರತೀಯರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
"ತಮಗೆ ಸೂಕ್ತ ವೇತನ ಲಭಿಸುತ್ತಿಲ್ಲವೆಂದಾದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಕಾನೂನು ವಾಹಿನಿಗಳು ಮತ್ತು ನ್ಯಾಯಯುತ ಮಾರ್ಗಗಳಿವೆ. ಅದು ಬಿಟ್ಟು ಹಿಂಸಾಚಾರದ ದಾರಿಹಿಡಿಯುವುದು ಸಮಂಜಸವಲ್ಲ" ಎಂದು ದುಬೈ ಕ್ರಿಮಿನಲ್ ಕೋರ್ಟಿನ ನ್ಯಾಯಾಧೀಶ ಜಾಸಿಮ್ ಬಖಾರ್ ಹೇಳಿದ್ದಾರೆ.
ಸಾರ್ವಜನಿಕೆ ಭದ್ರತೆಗೆ ಅಪಾಯ ಒಡ್ಡಿದ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡಿದ ಮತ್ತು ಇತರ ಕಾರ್ಮಿಕರನ್ನು ಮುಷ್ಕರಕ್ಕೆ ಪ್ರೇರೇಪಿಸಿರುವ ಕಾರಣಕ್ಕೆ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಮಾನಿಸಿದೆ ಎಂದು 'ಗಲ್ಫ್ ನ್ಯೂಸ್' ವರದಿ ಮಾಡಿದೆ.
|