ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ವಿರುದ್ಧ ಹೊಸ ದಿಗ್ಬಂಧನಕ್ಕೆ ಒತ್ತಾಯ
ಟೆಹ್ರಾನ್ ತನ್ನ ಅಣುಯೋಜನೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಹೊಸ ದಿಗ್ಬಂಧನಗಳನ್ನು ಹೇರಬೇಕು ಎಂದು ಪಾಶ್ಚಾತ್ಯ ಶಕ್ತಿಗಳು ಒತ್ತಾಯಿಸಿವೆ. ಏತನ್ಮಧ್ಯೆ, ಹೊಸ ದಿಗ್ಬಂಧನ ಹೇರಿದಲ್ಲಿ ತೈಲಬೆಲೆ ಏರಿಕೆಯನ್ನು ಅನುಭವಿಸಬೇಕಾದೀತು ಎಂದು ಇರಾನ್ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಾದ ಚೀನ, ರಷ್ಯಾ, ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸಿನ ಹಿರಿಯ ರಾಜತಾಂತ್ರಿಕರು ಕಳೆದ ರಾತ್ರಿ ವಾಶಿಂಗ್ಟನ್‌ನಲ್ಲಿ ಸಭೆ ನಡೆಸಿ ಇರಾನ್ ವಿರುದ್ಧದ ಕಾರ್ಯತಂತ್ರದ ಕುರಿತು ಚರ್ಚಿಸಿದರು.

ನ್ಯೂಯಾರ್ಕಿನಲ್ಲಿ ಚರ್ಚಿಸಲಾಗುತ್ತಿರುವ ದಿಗ್ಬಂಧನಗಳ ಕರಡು ಶಿಫಾರಸಿಗೆ ಶೀಘ್ರವೇ ಮತಚಲಾಯಿಸುವ ನಿರೀಕ್ಷೆಯನ್ನು ನಾವು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಟಾಮ್ ಕ್ಯಾಸೆ ಸಭೆಯ ನಂತರ ತಿಳಿಸಿದರು.

ಇರಾನ್ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಆರೋಪಿಸುತ್ತಿರುವ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದಿಗ್ಬಂಧನ ಹೇರುವಂತೆ ಒತ್ತಾಯಿಸುತ್ತಿದ್ದರೆ, ರಷ್ಯಾ ಮತ್ತು ಚೀನ ದಿಗ್ಬಂಧನ ಹೇರುವಿಕೆಯನ್ನು ವಿರೋಧಿಸುತ್ತಿವೆ.

ಪಾಶ್ಚಾತ್ಯ ರಾಷ್ಟ್ರಗಳ ಆರೋಪವನ್ನು ತಳ್ಳಿಹಾಕಿರುವ ಇರಾನ್, ಅಣ್ವಸ್ತ್ರ ತಯಾರಿ ಕಾರ್ಯವನ್ನು ಅಲ್ಲಗಳೆದಿದೆ. ತನ್ನ ಅಣುಯೋಜನೆಯು ಶಾಂತಿಯ ಉದ್ದೇಶಗಳಿಗೆ ಎಂದು ಹೇಳುತ್ತಲೇ ಬಂದಿದ್ದು, ಅಮೆರಿಕದ ಬೆದರಿಕೆಗಳಿಗೆ ಸೊಪ್ಪು ಹಾಕುತ್ತಿಲ್ಲ.
ಮತ್ತಷ್ಟು
ದುಬೈ: ಮುಷ್ಕರ ಹೂಡಿದ ಭಾರತೀಯರಿಗೆ ಜೈಲು
ಪಾಕ್ ಸ್ಫೋಟಕ್ಕೆ ಮೇಜರ್ ಜನರಲ್ ಆಹುತಿ
ಮುಶರಫ್ 'ಮರ್ಯಾದೆಯಿಂದ' ಸ್ಥಾನ ತೊರೆಯಲಿ
ಚೀನ ಗಣಿ ದುರಂತ: ಮೂವರಿಗೆ ಜೀವಾವಧಿ
ಕ್ಯೂಬಾ: ರವುಲ್ ಅಧಿಕಾರ ಸ್ವೀಕಾರ
ಮುಷರಫ್ ಅಧಿಕಾರದಿಂದ ಕೆಳಗಿಳಿಯುವುದು ಸೂಕ್ತ