ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೋನೆನ್ ವಿಸ್ತರಣೆಗೆ ಅಮೆರಿಕ ಸಂತಸ
ಭಾರತವು ತನ್ನ ಅಮೆರಿಕಾ ರಾಯಭಾರಿ ರೋನೆನ್ ಸೇನ್ ಅವರ ಅಧಿಕಾರವಧಿಯನ್ನು ವಿಸ್ತರಿಸಿರುವುದಕ್ಕೆ ತಾನು 'ಅತ್ಯಂತ ಸಂತಸ'ಗೊಂಡಿರುವುದಾಗಿ ಅಮೆರಿಕ ಹೇಳಿದೆ. ಅಲ್ಲದೆ, ಭಾರತದ ಈ ಕ್ರಮವು ದ್ವಿಪಕ್ಷೀಯ ಸಂಬಂಧಗಳು 'ಸಕಾರಾತ್ಮಕ ದಿಕ್ಕಿನಲ್ಲಿ' ಮುಂದುವರಿಯಲು ಸಹಕರಿಸಲಿದೆ ಎಂದೂ ಹೇಳಿದೆ.

"ಸೇನ್ ಅವರು ನಮ್ಮ ದೇಶದ ಒಬ್ಬ ಉತ್ತಮ ಮಿತ್ರ, ನಾವು ಇದರಿಂದ ಸಂತಸಗೊಂಡಿದ್ದೇವೆ" ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಆಧೀನ ಕಾರ್ಯದರ್ಶಿ ನಿಕೋಲಸ್ ಬರ್ನ್ಸ್ ಹೇಳಿದ್ದಾರೆ. ಅವರು ವಿದೇಶಾಂಗ ವ್ಯವಹಾರಗಳ ಮಂಡಳಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಭಾರತ-ಅಮೆರಿಕ ನಡುವಿನ ಅಣುಒಪ್ಪಂದವು ಅತ್ಯಂತ ಮಹತ್ತರ ಘಟ್ಟದಲ್ಲಿ ಇರುವಾಗ ಭಾರತ ಸರಕಾರವು ತನ್ನ ರಾಯಭಾರಿಯನ್ನು ಬದಲಿಸುವ ಇಚ್ಛೆ ಹೊಂದಿಲ್ಲ. ಹಾಗಾಗಿ ಸೇನ್ ಅವರೇ ರಾಯಭಾರಿಯಾಗಿ ಮುಂದುವರಿಯುವಂತೆ ಹೇಳಲಾಗಿದೆ.

64ರ ಹರೆಯದ ರೋನೆನ್ ಸೇನ್ 2004ರ ಆಗಸ್ಟ್‌ನಿಂದ ಅಮೆರಿಕ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಬದಲಿಸುವಂತೆ ಈ ಹಿಂದೆ ಸರಕಾರ ನಿರ್ಧರಿಸಿತ್ತಾದರೂ, ಬಳಿಕ ಅದು ತನ್ನ ನಿರ್ಧಾರ ಬದಲಿಸಿತೆನ್ನಲಾಗಿದೆ.
ಮತ್ತಷ್ಟು
ಇರಾನ್ ವಿರುದ್ಧ ಹೊಸ ದಿಗ್ಬಂಧನಕ್ಕೆ ಒತ್ತಾಯ
ದುಬೈ: ಮುಷ್ಕರ ಹೂಡಿದ ಭಾರತೀಯರಿಗೆ ಜೈಲು
ಪಾಕ್ ಸ್ಫೋಟಕ್ಕೆ ಮೇಜರ್ ಜನರಲ್ ಆಹುತಿ
ಮುಶರಫ್ 'ಮರ್ಯಾದೆಯಿಂದ' ಸ್ಥಾನ ತೊರೆಯಲಿ
ಚೀನ ಗಣಿ ದುರಂತ: ಮೂವರಿಗೆ ಜೀವಾವಧಿ
ಕ್ಯೂಬಾ: ರವುಲ್ ಅಧಿಕಾರ ಸ್ವೀಕಾರ