ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಸರಕಾರಕ್ಕೆ ಬಾಹ್ಯ ಬೆಂಬಲ: ಪಿಎಂಎಲ್-ಎನ್
ಪಿಪಿಪಿ ನೇತೃತ್ವದ ಸಮ್ಮಿಶ್ರ ಸರಕಾರದೊಂದಿಗೆ ಜತೆಗೂಡುವುದಿಲ್ಲ ಬದಲಾಗಿ ಪಿಪಿಗೆ ಬಾಹ್ಯ ಬೆಂಬಲವನ್ನು ನೀಡಲಿದೆ ಎಂದು ನವಾಸ್ ಶರೀಫ್ ಅವರ ಪಿಎಂಎಲ್-ಎನ್ ಪಕ್ಷವು ತಿಳಿಸಿದೆ.

ಪರ್ವೇಜ್ ಮುಷರಫ್ ಅಧ್ಯಕ್ಷರಾಗಿಯೇ ಉಳಿದರೆ ಪಿಎಂಎಲ್-ಎನ್ ಪಕ್ಷವು ಸಂಸತ್ತಿನಲ್ಲಿ ಇರಲು ಬಯಸುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಕ್ಷವು ತಿಳಿಸಿದೆ.

ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮುಷರಫ್ ಬೆಂಬಲಕ್ಕೆ ನಿಂತಿದ್ದು, ಚುನಾವಣೆಯಲ್ಲಿನ ಸೋಲಿನ ನಂತರ ಅಧಿಕಾರವನ್ನು ತ್ಯಜಿಸಬೇಕೆಂಬ ಒತ್ತಾಯದ ನಡುವೆಯೂ ಮುಷರಫ್‌ಗೆ ಅಮೆರಿಕವು ನಿರಂತರ ಬೆಂಬಲ ನೀಡಲಿದೆಯೆಂದು ಶ್ವೇತ ಭವನ ವಕ್ತಾರರು ತಿಳಿಸಿದ್ದಾರೆ.

ಪಿಎಂಎಲ್-ಎನ್ ಪಕ್ಷ ವು ಸಚಿವಾಲಯದಲ್ಲಿ ಅಥವಾ ಸರಕಾರದಲ್ಲಿ ಯಾವುದೇ ಪಾಲನ್ನು ಬಯಸುವುದಿಲ್ಲ ಆದರೆ, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಎರಡು ಪಕ್ಷಗಳಿಂದ ನಡೆದ ಒಪ್ಪಂದವನ್ನು ಜಾರಿಗೆ ತರಲು ಮತ್ತು ಮುಖ್ಯ ಅಜೆಂಡಾವನ್ನು ಕಾರ್ಯರೂಪಕ್ಕೆ ತರುವಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಗೆ ಸಹಕಾರ ನೀಡಲಿದೆ ಎಂದು ವಕ್ತಾರ ಅಶಾನ್ ಇಕ್ಬಾಲ್ ತಿಳಿಸಿದ್ದಾರೆ.
ಮತ್ತಷ್ಟು
ರೋನೆನ್ ವಿಸ್ತರಣೆಗೆ ಅಮೆರಿಕ ಸಂತಸ
ಇರಾನ್ ವಿರುದ್ಧ ಹೊಸ ದಿಗ್ಬಂಧನಕ್ಕೆ ಒತ್ತಾಯ
ದುಬೈ: ಮುಷ್ಕರ ಹೂಡಿದ ಭಾರತೀಯರಿಗೆ ಜೈಲು
ಪಾಕ್ ಸ್ಫೋಟಕ್ಕೆ ಮೇಜರ್ ಜನರಲ್ ಆಹುತಿ
ಮುಶರಫ್ 'ಮರ್ಯಾದೆಯಿಂದ' ಸ್ಥಾನ ತೊರೆಯಲಿ
ಚೀನ ಗಣಿ ದುರಂತ: ಮೂವರಿಗೆ ಜೀವಾವಧಿ