ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋ ಹತ್ಯೆ: ಪ್ರಮುಖ ಉಗ್ರನ ಸೆರೆ
PTI
ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಹತ್ಯೆಗೆ ಸಂಚು ರೂಪಿಸಿದ ರೂವಾರಿ ಎಂದು ಹೇಳಲಾಗಿರುವ ಪ್ರಮುಖ ಉಗ್ರನೊಬ್ಬನನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ.

ಲಾಹೋರ್ ಸಮೀಪದ ಫೆರೋಜ್‌ವಾಲ ಎಂಬಲ್ಲಿ ಮಂಗಳವಾರ ಭದ್ರತಾ ಪಡೆಗಳು ಖಾರಿ ಸೈಫುಲ್ಲಾ ಅಕ್ತರ್ ಹಾಗೂ ಆತನ ಮೂವರು ಮಕ್ಕಳನ್ನು ಬಂಧಿಸಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.

ಬಂಧಿತ ಅಕ್ತರ್, ಅಲ್-ಕೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಈತ ನಿಷೇಧಿತ ಹರ್ಕತುಲ್ ಜಿಹಾದ್ ಅಲ್-ಇಸ್ಲಾಮಿ ಸಂಘಟನೆಯ ಮುಖ್ಯಸ್ಥ. 1880ರಲ್ಲಿ ಅಫ್ಘಾನಿಸ್ತಾನವನ್ನು ಸೋವಿಯತ್ ಆಕ್ರಮಿಸಿಕೊಂಡಾಗ, ಮುಜಾಹಿದೀನ್ ಜತೆಗೆ ಈತ ಕಾದಾಡಿದ್ದ. 1990ರಲ್ಲಿ ಜಮ್ಮು ಕಾಶ್ಮೀರಕ್ಕೆ ಕಳುಹಿಸಿದ ಜಿಹಾದಿ ಹೋರಾಟಗಾರರಿಗೆ ಈತ ತರಬೇತಿಯನ್ನೂ ನೀಡಿದ್ದ.

ಪಾಕಿಸ್ತಾನವು 1995ರಲ್ಲಿ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ತಾನ ಸೇನೆಯು ನಡೆಸಿದ್ದ ಸಂಚಿನಲ್ಲಿ ಶಾಮೀಲಾಗಿದ್ದ. ಈ ವೇಳೆ ಆತ ಪ್ರಥಮ ಬಾರಿಗೆ ಪ್ರಾಮುಖ್ಯತೆ ಪಡೆದುಕೊಂಡಿದ್ದ. ಆಗ ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಬಿಡುಗಡೆ ಮಾಡಲಾಗಿತ್ತು.
ಮತ್ತಷ್ಟು
ನೂತನ ಸರಕಾರಕ್ಕೆ ಬಾಹ್ಯ ಬೆಂಬಲ: ಪಿಎಂಎಲ್-ಎನ್
ರೋನೆನ್ ವಿಸ್ತರಣೆಗೆ ಅಮೆರಿಕ ಸಂತಸ
ಇರಾನ್ ವಿರುದ್ಧ ಹೊಸ ದಿಗ್ಬಂಧನಕ್ಕೆ ಒತ್ತಾಯ
ದುಬೈ: ಮುಷ್ಕರ ಹೂಡಿದ ಭಾರತೀಯರಿಗೆ ಜೈಲು
ಪಾಕ್ ಸ್ಫೋಟಕ್ಕೆ ಮೇಜರ್ ಜನರಲ್ ಆಹುತಿ
ಮುಶರಫ್ 'ಮರ್ಯಾದೆಯಿಂದ' ಸ್ಥಾನ ತೊರೆಯಲಿ