ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಗಡಿಪಾರು ಹೇರಿಕೊಂಡಿದ್ದ ಥಾಯ್ಲಾಂಡಿನ ಮಾಜಿ ಪ್ರಧಾನಿ ತಕ್ಸಿನ್ ಶಿನವಾತ್ರ, 17 ತಿಂಗಳ ವಿದೇಶ ವಾಸದಿಂದ ರಾಷ್ಟ್ರಕ್ಕೆ ಮರಳಿದ್ದಾರೆ. ಇದರಿಂದಾಗಿ ಪ್ರಜಾಪ್ರಭುತ್ವ ಮರುಸ್ಥಾಪನೆಯ ಪ್ರಯತ್ನಗಳು ನಡೆಯುತ್ತಿದ್ದರೂ ರಾಜಕೀಯ ಅಸ್ಥಿರತೆ ಮತ್ತಷ್ಟು ಹೆಚ್ಚಿದಂತಾಗಿದೆ.
ಹಾಂಕಾಂಗಿನಿಂದ ಥಾಯ್ ಏರ್‌ವೇಸ್ ವಿಮಾನದಲ್ಲಿ, ಬ್ಯಾಂಕಾಕಿನ ಸುವರ್ಣಭೂಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಿನವಾತ್ರ ಭಾವಪರವಶರಾಗಿ ನೆಲದ ಮೇಲೆ ಮಂಡಿಯೂರಿ ಮುತ್ತಿಕ್ಕಿದರು.
ಥಾಯ್ಲಾಂಡಿನ ಹೊಸ ಸರಕಾರದ ಸದಸ್ಯರು ಸೇರಿದಂತೆ, ಶಿನವಾತ್ರರ ನೂರಾರು ಬೆಂಬಲಿಗರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದು, ಅವರನ್ನು ಬರಮಾಡಿಕೊಂಡರು.
|