ಪಾಸಿಸ್ತಾನದ ಹಿಂಸಾ ಜರ್ಜರಿತ ದಕ್ಷಿಣ ವಜಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿನ ನಡೆಸಲಾಗಿರುವ ಕ್ಷಿಪಣಿ ದಾಳಿಯಲ್ಲಿ ಕನಿಷ್ಟ 13 ಮಂದಿ ಸಾವಿಗೀಡಾಗಿದ್ದು ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ 10 ಮಂದಿ ಅರಬ್‌ನವರಾಗಿದ್ದು, ಉಳಿದವರು ಪಾಕ್‌ನ ಪಂಜಾಬ್ ಪ್ರಾಂತ್ಯದವರಾಗಿದ್ದಾರೆ.
ದಕ್ಷಿಣ ವಜಿರಿಸ್ತಾನದ ಅಜಮ್ ವರ್ಸಕ್ ಎಂಬಲ್ಲಿನ ಮದ್ರಸಾ ಹಾಗೂ ಮನೆಯೊಂದರ ಮೇಲೆ ಬೆಳಗ್ಗೆ 2 ಗಂಟೆಗೆ ಕ್ಷಿಪಣಿ ದಾಳಿ ಮಾಡಲಾಯಿತು. ಈ ವೇಳೆ ಮದ್ರಸಾ ವಿದ್ಯಾರ್ಥಿಗಳು ನಿದ್ರೆಯಲ್ಲಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಮದ್ರಸಾ ಮತ್ತು ಮನೆಯ ಮೇಲೆ ಮೂರು ರಾಕೆಟ್‌ಗಳು ಬಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕ್ಷಿಪಣಿಯನ್ನು ಅಮೆರಿಕ ನೇತೃತ್ವದ ಮೈತ್ರಿ ಪಡೆಗಳು ಹಾರಿಸಿದವೋ ಅಥವಾ ಪಾಕ್ ಪಡೆಯಿಂದ ಹಾರಿಸಲಾಯಿತೋ ಎಂಬುದು ಸ್ಪಷ್ಟವಾಗಿಲ್ಲ.
ಪಾಕ್ ತಾಲಿಬಾನ್ ನಾಯಕ ಬೈತುಲ್ಹಾ ಮೆಹ್ಸೂದ್ ಯುದ್ಧ ವಿರಾಮ ಘೋಷಿಸಿದ್ದರೂ ದಕ್ಷಿಣ ವಜಿರಿಸ್ತಾನದಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ.
|