ಮರಣದಂಡನೆಗೀಡಾಗಿ ಪಾಕಿಸ್ತಾನದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬನಿಗೆ ಅಲ್ಲಿನ ಅಧಿಕಾರಿಗಳು ಕ್ಷಮಾದಾನ ನೀಡಿದ್ದಾರೆ.
ಪಂಜಾಬಿನ ಹೋಶಿಯಾರ್‌ಪುರ ಪ್ರಾಂತ್ಯದ ನಿವಾಸಿಯಾಗಿರುವ ಕಾಶ್ಮೀರ್ ಸಿಂಗ್ ಎಂಬಾತನನ್ನು 1973ರಲ್ಲಿ ಗುಪ್ತಚರ ಕಾರ್ಯನಿರ್ವಹಣೆ ಆರೋಪದ ಮೇಲೆ ರಾವಲ್ಪಿಂಡಿಯಲ್ಲಿ ಬಂಧಿಸಲಾಗಿದ್ದು, ಮರಣದಂಡನೆ ವಿಧಿಸಲಾಗಿತ್ತು.
ಕಾಶ್ಮೀರ್ ಸಿಂಗ್‌ಗೆ ವಿಧಿಸಲಾಗಿದ್ದ ಮರಣದಂಡನೆಯು ಕಳೆದ 35 ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದಾಗಿ ಮುಂದೂಡುತ್ತಲೇ ಹೋಗಿದ್ದು, ಕೊನೆಗೂ ಕ್ಷಮಾದಾನ ಲಭಿಸಿದೆ.
ಹೋಶಿಯಾರ್‌ಪುರದಲ್ಲಿರುವ ಸಿಂಗ್ ಕುಟುಂಬವು ಅವರ ಬರವನ್ನು ಕಾತರದಿಂದ ಕಾಯುತ್ತಿದೆ.
|