ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಪ್ರಾಧಿಕಾರದೊಂದಿಗೆ ಐದನೆ ಸುತ್ತಿನ ಮಾತುಕತೆ ಅಂತ್ಯ
ಭಾರತವನ್ನು ಗಮನದಲ್ಲಿ ಇಟ್ಟಕೊಂಡು ಅಂತಾರಾಷ್ಟ್ರೀಯ ಅಣು ಪ್ರಾಧಿಕಾರ ಮತ್ತು ಭಾರತಗಳ ನಡುವೆ ಇಂದು ಐದನೆ ಸುತ್ತಿನ ಮಾತುಕತೆಗಳು ಅಂತ್ಯಗೊಂಡಿವೆ. ಐಎಇಎಯೊಂದಿಗೆ ನಡೆಯುತ್ತಿರುವ ಮಾತುಕತೆಗಳು ಭಾರತ ಮತ್ತು ಅಮೆರಿಕ ಮಾಡಿಕೊಂಡಿರುವ ನಾಗರಿಕ ಅಣು ಒಪ್ಪಂದದ ಜಾರಿಗೆ ಪ್ರಮುಖವಾಗಿವೆ.

ಸೋಮವಾರದಿಂದ ಪ್ರಾರಂಭವಾಗಿರುವ ಐದನೆ ಸುತ್ತಿನ ಮಾತುಕತೆಗಳು ಪೂರ್ಣಗೊಂಡಿದ್ದು ಆದರೆ ಉಭಯ ಪಕ್ಷಗಳು ಮಾತುಕತೆಯ ಫಲಿತಾಂಶವನ್ನು ಪ್ರಕಟಗೊಳಿಸಿಲ್ಲ. ಭಾರತದ ಪರವಾಗಿ ಅಣು ಶಕ್ತಿ ಇಲಾಖೆಯ ನಿರ್ದೇಶಕ ಡಾ. ರವಿ ಗ್ರೋವರ್ ಅವರು ಭಾರತದ ಪರ ಮಾತುಕತೆಯಲ್ಲಿ ಪಾಲ್ಗೊಂಡಿದ್ದು, ಇವರೊಂದಿಗೆ ಮಾತುಕತೆಯಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯದಲ್ಲಿ ಇರುವ ಭಾರತೀಯ ರಾಯಭಾರಿ ಸೌರಭ್ ಕುಮಾರ ಅವರು ಮಾತುಕತೆಯ ವಿವರ ನೀಡಲು ಲಭ್ಯವಾಗಿಲ್ಲ.

ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದ ಜಾರಿಯಾಗಬೇಕಿದ್ದಲ್ಲಿ ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಒಪ್ಪಂದ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಭಾರತವನ್ನು ಗಮನದಲ್ಲಿ ಇರಿಸಿಕೊಂಡು ನಡೆಸಲಾಗುತ್ತಿರುವ ಮಾತುಕತೆಯು ಅಂತಿಮ ಹಂತಕ್ಕೆ ತಲುಪಿದ್ದು. ಒಪ್ಪಂದದ ಕರಡು ಪ್ರತಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಅಣು ಶಕ್ತಿ ಉತ್ಪಾದನಾ ಕೇಂದ್ರಗಳ ತಪಾಸಣೆಗೆ ಸಂಬಂಧಿಸಿದಂತೆ ಒಪ್ಪಂದವನ್ನು ಶೀಘ್ರದಲ್ಲಿ ಅಂತಿಮಗೊಳಿಸಿ ಎಂದು ಒತ್ತಡ ತರುತ್ತಿದೆ. ಭಾರತ ಮಾತ್ರ ಅಣು ಶಕ್ತಿ ಮತ್ತು ಅಣ್ವಸ್ತ್ರ ತಂತ್ರಜ್ಞಾನದ ಸುರಕ್ಷತೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಡುವೆ ಸುದೀರ್ಘ ಮಾತುಕತೆ ಸಾಗಲಿ ಎಂದು ಹೇಳಿದೆ.

ಭಾರತೀಯ ವಿದೇಶಾಂಗ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಭಾರತ ಅಂತಿಮ ಗಡುವಿನತ್ತ ಗಮನ ಹರಿಸಿಲ್ಲ. ಅಂತಾರಾಷ್ಟ್ರೀಯ ಅಣು ಪ್ರಾಧಿಕಾರದೊಂದಿಗೆ ಮಾತುಕತೆಗಳು ಶೀಘ್ರದಲ್ಲಿ ಮುಕ್ತಾಯಗೊಂಡು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತಷ್ಟು
ಪಾಕ್: ಭಾರತೀಯ ಮರಣದಂಡನೆ ಕೈದಿಗೆ ಕ್ಷಮಾದಾನ
ಪಾಕ್: ಕ್ಷಿಪಣಿ ದಾಳಿಯಲ್ಲಿ 13 ಸಾವು
ಹೊಸ ಸರಕಾರದಿಂದ ಮುಶ್ ರೆಕ್ಕೆಪುಕ್ಕ ಕಟ್
ಬ್ಯಾಂಕಾಕ್‌ಗೆ ಮರಳಿದ ಶಿನವಾತ್ರ
ಜರ್ದಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಹಿಂತೆಗೆತ
ಭುಟ್ಟೋ ಹತ್ಯೆ: ಪ್ರಮುಖ ಉಗ್ರನ ಸೆರೆ