ಸದ್ದಾಮ್ ಹುಸ್ಸೇನ್ ಆಡಳಿತಾವಧಿಯಲ್ಲಿ ರಕ್ಷಣಾ ಸಚಿವನಾಗಿದ್ದ ಅಲಿ ಹಸನ್ ಅಲಿ ಮಜಿದ್ ಅಲಿಯಾಸ್ ಕೆಮಿಕಲ್ ಅಲಿಯನ್ನು ಗಲ್ಲಿಗೇರಿಸುವುದಕ್ಕೆ ಇರಾಕ್ ಸರಕಾರ ಒಪ್ಪಿಗೆ ನೀಡಿದೆ. ಅಲ್ ಹಸ್ಸನ್ ಅಲಿ- ಮಜೀದ್‌ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಗೆ ಇರಾಕ್ ಸರಕಾರ ಒಪ್ಪಿಗೆ ನೀಡಿದ್ದು ಶಿಕ್ಷೆಯ ಜಾರಿಯ ಸ್ಥಳ ಮತ್ತು ಸಮಯವನ್ನು ಸರಕಾರ ಇನ್ನೂ ನಿಗದಿ ಮಾಡಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಸರಕಾರಿ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಸದ್ದಾಮ್ ಆಡಳಿತಾವಧಿಯಲ್ಲಿ ರಕ್ಷಣಾ ಸಚಿವನಾಗಿದ್ದ ಅಲಿ ಹಸನ್ ಆಲ್- ಮಜೀದ್ ಖುರ್ದಿಷ್ ಜನರ ಮೇಲೆ ವಿಷಾನಿಲ ಪ್ರಯೋಗಿಸಿ ಸಾಮೂಹಿಕ ನರ ಸಂಹಾರ ಮಾಡಿದ ನಂತರ ಆತನಿಗೆ ಕೆಮಿಕಲ್ ಅಲಿ ಎಂದು ಹೆಸರು ಪಡೆದಿದ್ದ.
1988ರಲ್ಲಿ ನಡೆದ ನರ ಸಂಹಾರದಲ್ಲಿ ಅಂದಾಜು 1.82 ಸಾವಿರ ಖುರ್ದಿಷ್ ಜನರು ಸತ್ತಿದ್ದರು ಸುಮಾರು ನಾಲ್ಕು ಸಾವಿರ ಹಳ್ಳಿಗಳು ವಿಷಾನಿಲ, ಬಾಂಬ್ ದಾಳಿಗೆ ಈಡಾಗಿ ದ್ವಂಸಗೊಂಡಿದ್ದವು.
ಕೆಮಿಕಲ್ ಅಲಿಯೊಂದಿಗೆ ಇನ್ನಿಬ್ಬರನ್ನು ಆಪಾದಿತರನ್ನಾಗಿ ಮಾಡಲಾಗಿದ್ದು ರಕ್ಷಣಾ ಸಚಿವನಾಗಿದ್ದ ಸುಲ್ತಾನ್ ಹಶಿಮ್ ಅಲ್- ತಾಯ್ ಮತ್ತು ಸಶಸ್ತ್ರ ಸೇನಾ ಪಡೆಗಳ ಉಪ ಮುಖ್ಯಸ್ಥ ರಷಿದ್ ಆಲ್-ಟಿರ್ಕೆ ಅವರಿಗೂ ವಿಚಾರಣಾ ನ್ಯಾಯಾಲಯ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
|