ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್‌: ಮೂರು ದಿನಕ್ಕೆ 63 ಲಕ್ಷ ಬಿಲ್
ಕೆಲ ವಾರಗಳ ಹಿಂದೆ ಬ್ರಿಟನ್‌ಗೆ ಮೂರು ದಿನಗಳ ಭೇಟಿ ನೀಡಿದ ಪಾಕಿಸ್ತಾನ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಅವರ ಹೋಟೆಲ್ ವೆಚ್ಚ 63 ಲಕ್ಷ ರೂ.ಗಳಾಗಿದ್ದು, ಇಂತಹ ದುಂದುವೆಚ್ಚವನ್ನು ಭರಿಸುವರಾರು ಎಂದು ಸಂಸದರು ಮುಷರಫ್ ಅವರನ್ನು ಪ್ರಶ್ನಿಸಿದ್ದಾರೆ.

ಕಳೆದ ತಿಂಗಳು ಯುರೋಪ್ ದೇಶಗಳ 10 ದಿನಗಳ ಭೇಟಿ ಕಾರ್ಯಕ್ರಮವನ್ನು ಮುಷರಫ್ ಹಮ್ಮಿಕೊಂಡಿದ್ದು, ಹಿಂತಿರುಗಿ ಬರುವಾಗ ಲಂಡನ್‌ನಲ್ಲಿ ಭಾರಿ ವೆಚ್ಚದ ಐಶಾರಾಮಿ ಹೋಟೆಲ್ ಹೈಡೇ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ತಂಗಿದ್ದರಿಂದ 63ಲಕ್ಷ ರೂ.ವೆಚ್ಚವಾಗಿತ್ತು.

ಮುತ್ತಹಿದಾ ಮಜಲಿಸ್ -ಎ-ಅಮಲ್ ಪಕ್ಷದ ಸಂಸದ ಆಝಮ್ ಸ್ವಾತಿ ಅವರು ಮಾತನಾಡಿ ಮುಷರಫ್ ಅವರ ರಾಯಲ್ ಸೂಟ್‌ಗೆ ಪ್ರತಿ ರಾತ್ರಿಗೆ 21ಲಕ್ಷ ರೂ.ಗಳಂತೆ ಮೂರು ರಾತ್ರಿಗಳಿಗೆ 63 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.

ಸಂಸತ್ತಿನಲ್ಲಿ ಪರ್ವೇಜ್ ಮುಷರಫ್ ವಿರುದ್ದ ದೇಶದ ಬಡಜನತೆಯ ತೆರಿಗೆಯನ್ನು ದುರುಪಯೋಗ ಮಾಡುತ್ತಿರುವುದು ಸೇರಿದಂತೆ ಸಂಸದರು ಆರೋಪಗಳ ಸುರಿಮಳೆ ಮಾಡಿದರು ಮುಷರಫ್ ಅವರ ಬೆಂಬಲಕ್ಕೆ ಸಂಸದರಾರು ಧಾವಿಸಲಿಲ್ಲ.

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿರುವ ಹೋಟೆಲ್‌ ಹೈ ಡೇ ನಲ್ಲಿ ಪರ್ವೇಜ್ ಮುಷರಫ್ ಅವರ ಜೊತೆಯಲ್ಲಿ ಸಚಿವರು ಸಲಹೆಗಾರರು ಕೂಡಾ ಅದೇ ಹೋಟೆಲ್‌ನಲ್ಲಿ ತಂಗಿದ್ದರಿಂದ 63 ಲಕ್ಷ ರೂ.ಗಳ ವೆಚ್ಚವಾಗಿದೆ ಎಂದು ಅಧ್ಯಕ್ಷರ ಸಚಿವಾಲಯದ ಮೂಲಗಳು ತಿಳಿಸಿವೆ.

ಹೋಟೆಲ್ ಹೈ ಡೇ ಪಾರ್ಕ್‌ನಲ್ಲಿ ತಂಗಿದ್ದ ಮುಷರಫ್ ಅವರ ಹೋಟೆಲ್ ದರದ ಕುರಿತಂತೆ ನನಗೆ ಮಾಹಿತಿಯಿಲ್ಲ. ಬ್ರಿಟನ್‌ನಲ್ಲಿರುವ ಪಾಕ್ ರಾಯಭಾರಿ ಕಚೇರಿಯಿಂದ ವಿವರವಾದ ವರದಿಯನ್ನು ತರಿಸಿಕೊಳ್ಳಲಾಗುವುದು ಎಂದು ರಾಷ್ಟ್ರಾಧ್ಯಕ್ಷರ ವಕ್ತಾರ ಮೇಜರ್ ಜನರಲ್ ರಶೀದ್ ಖರೇಶಿ ತಿಳಿಸಿದ್ದಾರೆ.


ಮತ್ತಷ್ಟು
ಕೆಮಿಕಲ್ ಅಲಿ ಮರಣ ದಂಡನೆಗೆ ಇರಾಕ್ ಒಪ್ಪಿಗೆ
ಅಣು ಪ್ರಾಧಿಕಾರದೊಂದಿಗೆ ಐದನೆ ಸುತ್ತಿನ ಮಾತುಕತೆ ಅಂತ್ಯ
ಪಾಕ್: ಭಾರತೀಯ ಮರಣದಂಡನೆ ಕೈದಿಗೆ ಕ್ಷಮಾದಾನ
ಪಾಕ್: ಕ್ಷಿಪಣಿ ದಾಳಿಯಲ್ಲಿ 13 ಸಾವು
ಹೊಸ ಸರಕಾರದಿಂದ ಮುಶ್ ರೆಕ್ಕೆಪುಕ್ಕ ಕಟ್
ಬ್ಯಾಂಕಾಕ್‌ಗೆ ಮರಳಿದ ಶಿನವಾತ್ರ