ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೌಲಾನಾ ಫಜಲ್‌ಗೆ ಆಸೀಫ್ ಜರ್ದಾರಿ ಆಹ್ವಾನ
ಫೆಬ್ರವರಿ 18 ರಂದು ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಪಾಕಿಸ್ತಾನ ಮುಸ್ಲೀಮ್ ಲೀಗ್ ಪಕ್ಷವು ನೂತನ ಸರಕಾರ ರಚನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮುತ್ತಾಹಿದಾ ಮಜ್ಲಿಸ್ ಐ ಅಮಲ್ ಪಕ್ಷಕ್ಕೆ ಆಹ್ವಾನ ನೀಡಿದೆ.

ತಾಲಿಬಾನ್ ಪರ ಇರುವ ಜಮಾತೆ ಉಲೆಮಾ-ಇ- ಇಸ್ಲಾಮ್ ಸಂಘಟನೆ ಮುಖ್ಯಸ್ಥ ಮೌಲಾನಾ ಫಜಲುರ್ ರೆಹಮಾನ್ ಅವರೊಂದಿಗೆ ನಡೆಸಿದ ಸಭೆಯ ನಂತರ ಮಾತನಾಡಿದ ನಂತರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಅಸೀಫ್ ಅಲಿ ಜರ್ದಾರಿ ಅವರು ಎಂಎಂಎಗೆ ಆಹ್ವಾನ ನೀಡಿದ್ದಾರೆ.

ಮೌಲಾನಾ ಫಜಲುರ್ ರೆಹಮಾನ್ ಅವರೊಂದಿಗೆ ನಡೆದ ಸಭೆಯಲ್ಲಿ ಪಿಪಿಪಿ ಪಕ್ಷದ ಉಪಾದ್ಯಕ್ಷ ಮಕ್ದೂಮ್ ಅಮೀನ್ ಫಾಹಿಮ್, ಹಿರಿಯ ನಾಯಕರುಗಳಾದ ರಾಜಾ ರಬ್ಬಾನಿ, ಯುಸೂಫ್ ಗಿಲಾನಿ ಸೈಯ್ಯದ್ ಖುರ್ಷಿದ್ ಷಾ ಮತ್ತು ಮಕ್ದೂಮ್ ಶಾ ಮುಂತಾದವರು ಇದ್ದರು.

ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಎರಡು ಪಕ್ಷಗಳ ನಡುವೆ ದ್ವಿತೀಯ ಸುತ್ತಿನ ಮಾತುಕತೆ ನಡೆಯಲಿದೆ. ಜಮಾತೆ ಇಸ್ಲಾಮಿ ಹೊರತು ಪಡಿಸಿದರೆ ಎಂಎಂಎ ಚುನಾವಣೆಯಲ್ಲಿ ಏಳು ಸ್ಥಳಗಳಲ್ಲಿ ಗೆದ್ದಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೌಲಾನಾ ಫಜಲ್ ಅವರು, ಎರಡು ಪಕ್ಷಗಳು ರಾಷ್ಟ್ರೀಯ ಸರಕಾರವನ್ನು ರಚಿಸಲು ಆಸಕ್ತಿ ತೋರಿದ್ದು, ಎಂಎಂಎ ತನ್ನ ಆದ್ಯತೆಗಳ ಕುರಿತು ಪಿಪಿಪಿಗೆ ಮನವರಿಕೆ ಮಾಡಿಕೊಟ್ಟಿದೆ. ಮೊದಲನೆಯದಾಗಿ ಪಾಕಿಸ್ತಾನದಲ್ಲಿ ಸಂವಿಧಾನ ಜಾರಿಗೆ, ಕಾನೂನಿನ ಆಡಳಿತ, ಮತ್ತು ಮಿಲಿಟರಿಯನ್ನು ರಾಜಕೀಯದಿಂದ ದೂರ ಇಡುವುದು ಮುಖ್ಯ ಎಂದು ಹೇಳಿದೆ.
ಮತ್ತಷ್ಟು
ಮುಷರಫ್‌: ಮೂರು ದಿನಕ್ಕೆ 63 ಲಕ್ಷ ಬಿಲ್
ಕೆಮಿಕಲ್ ಅಲಿ ಮರಣ ದಂಡನೆಗೆ ಇರಾಕ್ ಒಪ್ಪಿಗೆ
ಅಣು ಪ್ರಾಧಿಕಾರದೊಂದಿಗೆ ಐದನೆ ಸುತ್ತಿನ ಮಾತುಕತೆ ಅಂತ್ಯ
ಪಾಕ್: ಭಾರತೀಯ ಮರಣದಂಡನೆ ಕೈದಿಗೆ ಕ್ಷಮಾದಾನ
ಪಾಕ್: ಕ್ಷಿಪಣಿ ದಾಳಿಯಲ್ಲಿ 13 ಸಾವು
ಹೊಸ ಸರಕಾರದಿಂದ ಮುಶ್ ರೆಕ್ಕೆಪುಕ್ಕ ಕಟ್