ರಶ್ಯಾದಲ್ಲಿ ಮಾರ್ಚ್ ಎರಡರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, 109 ಮಿಲಿಯನ್‌ಗಿಂತಲೂ ಹೆಚ್ಚು ರಶ್ಯಾ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ.
ದೇಶದಾದ್ಯಂತ 96,000 ಮತದಾನ ಕೇಂದ್ರಗಳಲ್ಲಿ ಮತದಾನವು ನಡೆಯಲಿದೆ.
ನಾಲ್ಕು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ನಿವೃತ್ತಿ ಹೊಂದಲಿರುವ ಅಧ್ಯಕ್ಷ ವ್ಲಾಡಮೀರ್ ಪುತಿನ್ ಅವರಿಂದ ಅಂಗೀಕರಿಸಲ್ಪಟ್ಟ ,ಉಪ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರು ವಿಜಯ ಸಾಧಿಸುವ ನಿರೀಕ್ಷೆಯಿದೆ.
ಇವರೊಂದಿಗೆ, ಕಮ್ಯುನಿಸ್ಟ್ ಜೆನಡಿ ಜ್ಯುಗಾನೋ, ಅಲ್ಟ್ರಾನ್ಯಾಶನಲಿಸ್ಟ್ ವ್ಲಾಡ್ಮೀರ್ ಜಿರಿನೋಸ್ಕಿ, ಮತ್ತು ಪ್ರಮುಖ ರಾಜಕಾರಣಿ ಆಂಡ್ರೀ ಬಾಗ್ದಾನೋ ಸ್ಪರ್ಧಾಕಣದಲ್ಲಿದ್ದಾರೆ.
|