ಅಧ್ಯಕ್ಷ ಪರ್ವೇಜ್ ಮುಶರಫ್ ತನ್ನ ಸ್ಥಾನವನ್ನು ತೊರೆಯುವುದಿಲ್ಲ, ಬದಲಿಗೆ, ಹೊಸ ಮೈತ್ರಿ ಸರಕಾರದೊಂದಿಗೆ ಮುಂದುವರಿಯಲು ಇಚ್ಛಿಸುತ್ತಾರೆ ಎಂದು ಅವರ ವಕ್ತಾರ ಜನರಲ್(ನಿವೃತ್ತ) ರಶೀದ್ ಖುರೇಶಿ ಹೇಳಿದ್ದಾರೆ.
ಮುಶರಫ್ ಅವರ ರಾಜೀನಾಮೆ ಕುರಿತು ವರದಿ ಬಿತ್ತರಿಸಿದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಈ ವರದಿಗಳು ಆಧಾರರಹಿತ ಎಂದು ಹೇಳಿದ್ದಾರೆ.
ಅಧ್ಯಕ್ಷರೊಂದಿಗೆ ಕಾರ್ಯವೆಸಗಲು ನವಾಜ್ ಶರೀಫ್ ಬಣ ಮಾತ್ರ ವಿರೋಧಿಸುತ್ತದೆ, ಹಾಗೂ ಇನ್ಯಾರಿಗೂ ಸಮಸ್ಯೆ ಇಲ್ಲ ಎಂದು ವಕ್ತಾರರು ಹೇಳಿದ್ದಾರೆ.
|