ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶದಲ್ಲಿ ಭರ್ಜರಿ ಜಯಗಳಿಸಿರುವ ಡಿಮಿಟ್ರಿ ಮೆಡ್ವೆಡೇವ್ ಅವರನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ.
ಇಂತಹ ವಿಜಯವು ಹೆಚ್ಚು ಜವಾಬ್ದಾರಿಯನ್ನು ಹೊಂದಿವೆ ಎಂದು ಮೆಡ್ವೆಡೇವ್ ಅವರನ್ನು ಅಭಿನಂದಿಸಿರುವ ಪುತಿನ್ ಹೇಳಿದ್ದಾರೆ. ಮತಗಟ್ಟೆಗಳು ಮುಚ್ಚಿದ ಬಳಿಕ ಕ್ರೆಮ್ಲಿನ್ ಸಮೀಪ ಕೆಂಪು ಚೌಕದಲ್ಲಿ ಪುತಿನ್ ಹಾಗೂ ಮೆಡ್ವೆಡೇವ್ ಜತೆಯಾಗಿ ಕಾಣಿಸಿಕೊಂಡರು.
ಕಳೆದ ಎಂಟು ವರ್ಷಗಳಿಂದ ನಾವು ಅನುಸರಿಸಿಕೊಂಡು ಬಂದಿರುವ ಯಶಸ್ವೀ ಹಾದಿಯು ಮುನ್ನಡೆಯಲಿದೆ ಎಂಬುದನ್ನು ಈ ವಿಜಯವು ಸಾಬೀತು ಮಾಡಿದೆ ಎಂದು ಪುತಿನ್ ಈ ಸಂದರ್ಭದಲ್ಲಿ ನುಡಿದರು. ಮೆಡ್ವೆಡೇವ್‌ಗೆ ಅಭಿನಂದನೆಗಳನ್ನು ಸಲ್ಲಿಸಿ ಅದೃಷ್ಟ ಹಾರೈಸಿದ ಪುತಿನ್, ಚುನಾವಣೆಯು ಸಂವಿಧಾನಾತ್ಮಕವಾಗಿ ನಡೆದಿದೆ ಎಂದು ಒತ್ತಿಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೆಡ್ವೆಡೇವ್, ತನಗೆ ಮತಚಲಾಯಿಸಿದ ಮತ್ತು ಇತರ ಅಭ್ಯರ್ಥಿಗಳಿಗೆ ಮತಚಲಾಯಿಸಿದ ಎಲ್ಲಾ ಮತಾದರರಿಗೆ ವಂದನೆಗಳನ್ನು ಸಲ್ಲಿಸಿದರು. ವ್ಲಾಡಿಮಿರ್ ಪುತಿನ್ ಅನುಸರಿಸಿದ ಹಾದಿಯನ್ನೇ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ಅವರು ನುಡಿದರು.
|