ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾ: ಭಾರತೀಯರ ಸುರಕ್ಷೆಗೆ ಕ್ರಮ
ಇಸ್ರೇಲ್ ಆಕ್ರಮಣಕ್ಕೆ ತುತ್ತಾಗಿರುವ, ಹಮಸ್ ಆಡಳಿತೆಯ ಗಾಜಾಪಟ್ಟಿಯಲ್ಲಿರುವ ಭಾರತೀಯರ ಸುರಕ್ಷೆಯನ್ನು ಖಚಿತ ಪಡಿಸಲು ಭಾರತವು ತಯಾರಿ ನಡೆಸಿದೆ.

ಗಾಝಾ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತವು ಈ ಕ್ರಮಕ್ಕೆ ಮುಂದಾಗಿದೆ. ಗಾಜಾಪಟ್ಟಿಯಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಪರಿಸ್ಥಿತಿಯು ತೀರಾ ಹದಗೆಟ್ಟಲ್ಲಿ ಅಲ್ಲಿ ನೆಲೆಸಿರುವ ಭಾರತೀಯರ ಸುರಕ್ಷೆಗಾಗಿ ಪೂರ್ವತಯಾರಿ ನಡೆಸಿರುವುದಾಗಿ, ಪ್ಯಾಲೆಸ್ತೀನ್‌ನಲ್ಲಿ ಭಾರತೀಯ ರಾಯಭಾರಿ ಝಿಕ್ರುರ್ ರೆಹ್ಮಾನ್ ಹೇಳಿದ್ದಾರೆ.

ಗಾಜದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ತಮ್ಮ ಒಡಾಟನ್ನು ನಿರ್ಬಂಧಿಸಲು ಸೂಚಿಸಲಾಗಿದೆ. ಗಾಝಾದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ. ರಮಲ್ಲಾದಲ್ಲಿರುವ ಭಾರತೀಯ. ಪ್ರತಿನಿಧಿ ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿರುವುದಾಗಿ ಗಾಜಾದಲ್ಲಿ ನೆಲೆಸಿರುವ ಪ್ರಿಯಾ ಸಗಾಲಿ ಹೇಳಿದ್ದಾರೆ.
ಮತ್ತಷ್ಟು
ಮೆಡ್ವೆಡೇವ್ ಭರ್ಜರಿ ಜಯಕ್ಕೆ ಪುತಿನ್ ಅಭಿನಂದನೆ
ಗಾಜಾ: ಇಸ್ರೇಲ್ ದಾಳಿಗೆ 54 ಮಂದಿ ಸಾವು
ರಷಿಯಾದಲ್ಲಿಂದು ಅಧ್ಯಕ್ಷೀಯ ಚುನಾವಣೆ
ಭಾರತ-ಪಾಕ್ ಆರ್ಥಿಕ ವೃದ್ಧಿ ಪ್ರಮುಖ: ಜರ್ದಾರಿ
ಮುಶರಫ್ ರಾಜೀನಾಮೆ ಇಲ್ಲ: ಖುರೇಶಿ
ಪಾಕ್: ಆತ್ಮಾಹುತಿ ಬಾಂಬರ್ ದಾಳಿಗೆ 38 ಬಲಿ