ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ದಾರಿಗೆ ಹೇಳಿಕೆಗೆ ಲಷ್ಕೆರೆ ಎಚ್ಚರಿಕೆ
ಕಾಶ್ಮೀರ ವಿವಾದ ಕುರಿತಂತೆ ಅಸಿಫ್ ಅಲಿ ಜರ್ದಾರಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ನಿಷೇಧಿತ ಸಂಸ್ಥೆ ಲಷ್ಕರೆ-ಇ-ತೋಯ್ಬ, ಭಾರತವನ್ನು ಓಲೈಸಲು ಯತ್ನಿಸದಿರುವಂತೆ ಎಚ್ಚರಿಕೆ ನೀಡಿದೆ.

ಕರಣ್ ಥಾಪರ್ ಅವರ ಡೆವಿಲ್ಸ್ ಎಡ್ವೋಕೇಟ್ ಕಾರ್ಯಕ್ರಮದಲ್ಲಿ ಕಾಶ್ಮೀರ ಕುರಿತು ಜರ್ದಾರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲಷ್ಕರೆ ಮುಖ್ಯಸ್ಥ ಹಫಿಜ್ ಸಯ್ಯದ್, ಜರ್ದಾರಿ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದು, ಕಾಶ್ಮೀರ ವಿವಾದ ಕುರಿತು ವಿಶ್ವಸಂಸ್ಥೆಯ ತನಿಖೆ ನಸಲು ಜರ್ದಾರಿ ಒತ್ತಾಯಿಸಬೇಕು ಎಂದು ತಾಕೀತು ಮಾಡಿರುವುದಾಗಿ ವರದಿಯಾಗಿದೆ.

ಕಾಶ್ಮೀರದ ಪಾವಿತ್ರ್ಯತೆಯನ್ನು ಪಾಕಿಸ್ತಾನವು ನಿರ್ಲಕ್ಷ್ಯಿಸಬಾರದು, ಯಾವುದೇ ವ್ಯಕ್ತಿ ಇಲ್ಲವೆ ಪಕ್ಷವು ಕಾಶ್ಮೀರವನ್ನು ನಿರ್ಲಕ್ಷಿಸಿದ್ದೇ ಆದರೆ ಆದು ಉಳಿಯಲಾರದು ಎಂದು ಸಯ್ಯದ್ ಬೆದರಿಕೆ ಹಾಕಿರುವುದಾಗಿ ವರದಿ ತಿಳಿಸಿದೆ.
ಸಯ್ಯದ್ ವ್ಯಕ್ತಪಡಿಸಿರುವಂತಹುದೇ ಅಭಿಪ್ರಾಯಗಳು ಕಾಶ್ಮೀರ ಕಣಿವೆಯಿಂದಲೂ ವ್ಯಕ್ತವಾಗಿದ್ದು, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನೆ, ಕಾಶ್ಮೀರವನ್ನು ಬದಿಗಿಡುವುದು ಪರ್ಯಾಯವಲ್ಲ ಎಂದು ಹೇಳಿದ್ದಾರೆ.

"ಇದೊಂದು ಬೇಜವಾಬ್ದಾರಿಯುತ ಹೇಳಿಕೆ. ಈ ಹೇಳಿಕೆಗೆ ಜನತೆಯ ಬೆಂಬಲವಿದೆ ಎಂದು ನಾನು ಭಾವಿಸುವುದಿಲ್ಲ. ಪಿಪಿಪಿಯು ಮೂರುಪಕ್ಷಗಳಲ್ಲಿ ಒಂದು ಪಕ್ಷವಾಗಿದೆಯಷ್ಟೆ. ಕಾಶ್ಮೀರ ಜನತೆಯ ಹಕ್ಕುಗಳಿಗೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬ ಇಂತಹ ಬೀಡುಬೀಸಾದ ಹೇಳಿಕೆ ನೀಡುವುದು ಸಮಂಜಸವಲ್ಲ" ಎಂಬುದಾಗಿ ಲೋನೆ ಪ್ರತಿಕ್ರಿಯಿಸಿದ್ದಾರೆ ಎಂದು ವರದಿ ಹೇಳಿದೆ.
ಮತ್ತಷ್ಟು
ರಷ್ಯಾದ ನಿಯೋಜಿತ ಅಧ್ಯಕ್ಷರ ಭಾರತ ಸಂಪರ್ಕ!
ಗಾಜಾ: ಭಾರತೀಯರ ಸುರಕ್ಷೆಗೆ ಕ್ರಮ
ಮೆಡ್ವೆಡೇವ್ ಭರ್ಜರಿ ಜಯಕ್ಕೆ ಪುತಿನ್ ಅಭಿನಂದನೆ
ಗಾಜಾ: ಇಸ್ರೇಲ್ ದಾಳಿಗೆ 54 ಮಂದಿ ಸಾವು
ರಷಿಯಾದಲ್ಲಿಂದು ಅಧ್ಯಕ್ಷೀಯ ಚುನಾವಣೆ
ಭಾರತ-ಪಾಕ್ ಆರ್ಥಿಕ ವೃದ್ಧಿ ಪ್ರಮುಖ: ಜರ್ದಾರಿ