ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್, ಇರಾಕ್ ಸದಾಚಾರದಲ್ಲಿ ಮುಂದು: ಅಹ್ಮದಿನೆಜಾದ್
'ನ್ಯಾಯ ಮತ್ತು ಸದಾಚಾರ'ದಲ್ಲಿ ಇರಾನ್ ಮತ್ತು ಇರಾಕ್‌ಗಳು ವಿಶ್ವದಲ್ಲೇ ಮುಂದಿವೆ ಎಂದು ಇರಾನ್ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಹೇಳಿದ್ದಾರೆ. ಅಮೆರಿಕವು ಈ ಪ್ರಾಂತ್ಯದಲ್ಲಿ ಭಯೋತ್ಪಾದನೆಯನ್ನು ಹಬ್ಬುತ್ತಿದೆ ಎಂಬುದಾಗಿ ನೀಡಿರುವ ಹೇಳಿಕೆಯ ಮರುದಿವಸ ಅವರ ಈ ಹೇಳಿಕೆ ಹೊರಬಿದ್ದಿದೆ.

ಇರಾಕ್‌ ಭೇಟಿಯಲ್ಲಿರುವ ಅಹ್ಮದಿನೆಜಾದ್ ತನ್ನ ಭೇಟಿಯ ಎರಡನೆ ದಿನದಂದು ಶಿಯ ಧರ್ಮಗುರುಗಳು, ಪಂಡಿತರೊಂದಿಗೆ ಬಗ್ದಾದ್‌ನಲ್ಲಿರುವ ಇರಾಕ್ ಅಧ್ಯಕ್ಷ ಜಲಾಲ್ ತಾಲ್ಬಾನಿಯವರ ನಿವಾಸದಲ್ಲಿ ಮಾತುಕತೆ ನಡೆಸಿದ ವೇಳೆ ಅವರ ಹೇಳಿಕೆ ಹೊರಬಿದ್ದಿದೆ.

80ರ ದಶಕದಲ್ಲಿ ಹತ್ತು ಲಕ್ಷ ಮಂದಿಯ ಪ್ರಾಣ ಬಲಿತೆಗೆದುಕೊಂಡಿರುವ ಎಂಟು ವರ್ಷಗಳ ಯುದ್ಧದ ಬಳಿಕ, ಇರಾಕ್‌ಗೆ ಭೇಟಿ ನೀಡುತ್ತಿರುವ ಇರಾನಿನ ಪ್ರಥಮ ಅಧ್ಯಕ್ಷ ಅವರಾಗಿದ್ದಾರೆ.

"ಆರು ವರ್ಷಗಳ ಹಿಂದೆ ಈ ಯಾವ ಭಯೋತ್ಪಾದಕರೂ ಇರಲಿಲ್ಲ. ಈ ರಾಷ್ಟ್ರ ಮತ್ತು ಈ ಪ್ರಾಂತ್ಯಕ್ಕೆ ಯಾವಾಗ ಇತರರು ಹೆಜ್ಜೆ ಇಟ್ಟರೊ ಅಂದಿನಿಂದ ಭಯೋತ್ಪಾದಕರ ಹೆಜ್ಜೆ ಗುರುತು ಕಾಣಲಾರಂಭಿಸಿದೆ" ಎಂದು ಆಹ್ಮದಿನೆಜಾದ್ ಅಮೆರಿಕ ನೇತೃತ್ವದಲ್ಲಿ ಇರಾಕ್ ಮೇಲಿನ 2003ರ ದಾಳಿಯನ್ನುದ್ದೇಶಿಸಿ ಭಾನುವಾರ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಮತ್ತಷ್ಟು
ಜರ್ದಾರಿಗೆ ಹೇಳಿಕೆಗೆ ಲಷ್ಕೆರೆ ಎಚ್ಚರಿಕೆ
ರಷ್ಯಾದ ನಿಯೋಜಿತ ಅಧ್ಯಕ್ಷರ ಭಾರತ ಸಂಪರ್ಕ!
ಗಾಜಾ: ಭಾರತೀಯರ ಸುರಕ್ಷೆಗೆ ಕ್ರಮ
ಮೆಡ್ವೆಡೇವ್ ಭರ್ಜರಿ ಜಯಕ್ಕೆ ಪುತಿನ್ ಅಭಿನಂದನೆ
ಗಾಜಾ: ಇಸ್ರೇಲ್ ದಾಳಿಗೆ 54 ಮಂದಿ ಸಾವು
ರಷಿಯಾದಲ್ಲಿಂದು ಅಧ್ಯಕ್ಷೀಯ ಚುನಾವಣೆ