ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತಿ ದೊಡ್ಡ ವಿಜೇತ ಪಕ್ಷವಾಗಿ ಮೂಡಿ ಬಂದಿರುವ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಮಕ್ದೂಮ್ ಫಾಹಿಮ್ ಅವರನ್ನು ಸರಕಾರ ರಚಿಸಲು ಅಧ್ಯಕ್ಷ ಪರ್ವೇಜ್ ಮುಶರಫ್ ಆಹ್ವಾನಿಸಲಿದ್ದಾರೆ.
ಪಿಪಿಪಿ ಸಂಸದೀಯರ ನಾಯಕರಾಗಿರುವ ಕಾರಣ ಫಾಹಿಮ್ ಅವರಿಗೆ ಆಹ್ವಾನ ಹೋಗಲಿದೆಯೆ ವಿನಹ ಪಕ್ಷದ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರಿಗೆ ಅಲ್ಲ.
ಪಿಪಿಪಿ ನಾಯಕಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಚೋ ಹತ್ಯೆಯಾದ ವೇಳೆಗೆ ಅವರ ಪುತ್ರ ಬಿಲ್ವಾಲ್‌ನನ್ನು ಪಕ್ಷದ ಔಪಚಾರಿಕ ಅಧ್ಯಕ್ಷನನ್ನಾಗಿಸಿ ಘೋಷಣೆ ಮಾಡಲಾಗಿತ್ತು. ಅವರ ಪತಿ ಅಸಿಫ್ ಅಲಿ ಜರ್ದಾರಿ ಪಕ್ಷದ ಸಹಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಪಕ್ಷದ ವ್ಯವಹಾರಗಳನ್ನು ನಿಭಾಯಿಸುತ್ತಿದ್ದಾರೆ.
|