ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅರಾಜಕತೆಗೆ ಇನ್ನೊಂದು ಉದಾಹರಣೆ ಎಂಬಂತೆ, ಲಾಹೋರಿನಲ್ಲಿರುವ ನೌಕಾ ಮುಖ್ಯಕಚೇರಿಯ ಪಾರ್ಕಿಂಗ್ ಲಾಟ್‌ಬಳಿ ನಡೆಸಿರುವ ಸರಣಿ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದಾರೆ.
ಮಧ್ಯಾಹ್ನದ ವೇಳೆಗೆ ನಿಮಿಷಗಳ ಅಂತರದಲ್ಲಿ ನಾಲ್ಕು ಸ್ಫೋಟಗಳು ಸಂಭವಿಸಿದ್ದು, ಇದು ಆತ್ಮಾಹುತಿ ದಾಳಿ ಎಂಬುದಾಗಿ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ನೌಕಾ ಯುದ್ಧ ತರಬೇತು ಕಾಲೇಜು ಬಳಿ ಸ್ಫೋಟಕಗಳನ್ನು ಲಾರಿಯಲ್ಲಿ ತುಂಬಲಾಗಿತ್ತು. ಆತ್ಮಾಹುತಿ ದಾಳಿಕೋರನ ಮೃತದೇಹವೂ ಪತ್ತೆಯಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಕಚೇರಿಯ ಪಾರ್ಕಿಂಗ್ ಪ್ರದೇಶದಲ್ಲಿ ರಕ್ತದೋಕುಳಿ ಹರಿದಿತ್ತು. ಭಯಭೀತ ಮಂದಿ ಸುರಕ್ಷಿತ ಸ್ಥಳ ಸೇರಿಕೊಳ್ಳಲು ಎಲ್ಲೆಂದರಲ್ಲಿ ಓಡುತ್ತಿರುವ ದೃಶ್ಯ ಕಂಡುಬಂದಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|