ಚೀನವು ತನ್ನ 2008ರ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಯ ಪಾಲನ್ನು ಶೇ.17.6ರಷ್ಟು ಹೆಚ್ಚಿಸಿರುವುದಕ್ಕೆ, ಭಾರತದ ಉದಾಹರಣೆ ನೀಡಿದ್ದು, ಮೊದಲ ಬಾರಿಗೆ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದೆ.
ಚೀನವು ತನ್ನ ಮುಂಗಡ ಪತ್ರದಲ್ಲಿ 417.769 ದಶಲಕ್ಷ ಯೆನ್(57.22 ದಶಲಕ್ಷ ಡಾಲರ್) ಹೆಚ್ಚಳ ಮಾಡಲು ನಿರ್ಧರಿಸಿರುವುದಾಗಿ ಚೀನ ಸಂಸತ್ತಿನ ಎನ್‌ಸಿಪಿಯ ರಾಷ್ಟ್ರೀಯ ಅಧಿವೇಶನದ ವಕ್ತಾರ ಜಿಯಾಂಗ್ ಎಂಝು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಹಿಂದಿನ ವರ್ಷಗಳಿಗೆ ವ್ಯತಿರಿಕ್ತ ಎಂಬಂತೆ, ಸೇನಾ ಕಾರ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಮೀಸಲಿಗೆ ಅವರು ಭಾರತದ ಉದಾಹರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ.
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಒಟ್ಟು ರಾಷ್ಟ್ರೀಯ ಉತ್ಪನ್ನ ಹಾಗೂ ಒಟ್ಟು ಆರ್ಥಿಕ ವೆಚ್ಚದ ಎದುರು ಚೀನವು ರಕ್ಷಣಾ ಕಾರ್ಯಗಳಿಗಾಗಿ ವ್ಯಯಿಸುವ ಮೊತ್ತ ಅತ್ಯಂತ ಕಡಿಮೆ ಎಂದವರು ಬೆಟ್ಟು ಮಾಡಿದರು.
|