ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿಪಿಪಿಯಿಂದ ಸಚಿವರ ಪಟ್ಟಿ ಅಂತಿಮ
PTI
ಪಾಕಿಸ್ತಾನದ ಪ್ರಧಾನ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಪಿಪಿಪಿಯು ತನ್ನ ಮಿತ್ರಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್)ನೊಂದಿಗಿನ ಸಮಾಲೋಚನೆ ಬಳಿಕ ಪ್ರಥಮ ಹಂತದ ಸಂಪುಟ ರಚನೆಗೆ 11 ಹೆಸರುಗಳನ್ನು ಅಂತಿಮಗೊಳಿಸಿದೆ.

ಪಿಪಿಪಿಯ ಕೇಂದ್ರೀಯ ನಾಯಕತ್ವವು 11 ಹೆಸರುಗಳನ್ನು ಅಂತಿಮಗೊಳಿಸಿದ್ದು, ಇವುಗಳಲ್ಲಿ ಐವರು ಪಂಜಾಬ್, ನಾಲ್ವರು ಸಿಂಧ್ ಮತ್ತು ತಲಾ ಒಬ್ಬೊಬ್ಬರು ವಾಯುವ್ಯ ಪ್ರಾಂತ್ಯ ಹಾಗೂ ಬಲೂಚಿ ಸ್ಥಾನದವರಾಗಿದ್ದಾರೆ ಎಂದು ದೂರದರ್ಶನ ವಾಹಿನಿಯೊಂದು ವರದಿ ಮಾಡಿದೆ.

ಹಿರಿಯ ನಾಯಕರಾದ ಯೂಸುಫ್ ರಾಜಾ ಗಿಲ್ಲಾನಿ, ಶಾ ಮೆಹ್ಮೂದ್ ಖುರೇಶಿ, ಚೌಧುರಿ ಆಹ್ಮದ್ ಮುಕ್ತಾರ್, ಸರ್ದಾರ್ ಆಸಿಫ್ ಮತ್ತು ರಾಜಾ ಪರ್ವೇಜ್ ಅಶ್ರಫ್ ಅವರುಗಳು ಪಂಜಾಬ್ ಪ್ರಾಂತ್ಯದಿಂದ ಆಯ್ಕೆಯಾಗಿದ್ದಾರೆ.
ಸಿಂಧ್‌ನ ಖುರ್ಶಿದ್ ಶಾ, ನವೀದ್ ಖಮರ್, ರಾದಾ ರಬ್ಬಾನಿ, ಶೇರಿ ರೆಹ್ಮಾನ್ ಹಾಗೂ ವಾಯುವ್ಯ ಪ್ರಾಂತ್ಯದ ಅಬ್ದುಲ್ ಅಲ್-ಅಕ್ಬರ್ ಮತ್ತು ಬಲೂಚಿಸ್ಥಾನದ ತಾಜ್ ಮುಹಮ್ಮದ್ ಜಮಾಲಿ ಅವರುಗಳ ಹೆಸರನ್ನು ಒಕ್ಕೂಟದ ನೂತನ ಸಂಪುಟಕ್ಕೆ ಸೂಚಿಸಲಾಗಿದೆ.

ಇಷ್ಟಾದರೂ ಪ್ರಧಾನಿ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಅಮಿನ್ ಫಾಹಿಮ್ ಅವರ ಹೆಸರು ಪ್ರಧಾನವಾಗಿ ಕೇಳುತ್ತಿದ್ದರೂ, ಚೌಧುರಿ ಅಹಮ್ಮದ್ ಮುಕ್ತಾರ್, ಶಾ ಮೆಹಮ್ಮೂದ್ ಖುರೇಶಿ ಮತ್ತು ಯೂಸುಫ್ ರಾಝಾ ಗಿಲ್ಲನಿ ಅವರ ಹೆಸರೂ ಉನ್ನತ ಸ್ಥಾನದ ಸ್ಫರ್ಧೆಯಲ್ಲಿದೆ. ಈ ಕುರಿತ ಅಂತಿಮ ನಿರ್ಣಯ ನಾಳೆ ಹೊರಬೀಳಲಿದೆ.
ಮತ್ತಷ್ಟು
ಪಾಕ್ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಯುಎಸ್ ನಕಾರ
ಸಿಡಿದೆದ್ದು ನಿಂತ ಹಿಲರಿ; ಒಬಾಮಾಗೆ ಮುನ್ನಡೆ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ
ರಕ್ಷಣಾವೆಚ್ಚ: ಭಾರತವನ್ನು ಉದಾಹರಿಸಿದ ಚೀನ
ಪಾಕ್: ನೌಕಾ ಕಚೇರಿಯಲ್ಲಿ ಸ್ಫೋಟ, 8 ಸಾವು
ಪಾಕ್ ಸರಕಾರ ರಚನೆ: ಫಾಹಿಮ್‌ಗೆ ಆಹ್ವಾನ