ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆನಜೀರ್ ಹತ್ಯೆ: 5 ಶಂಕಿತರಿಗೆ ನ್ಯಾಯಾಂಗ ಬಂಧನ
WD
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಐವರು ಶಂಕಿತರನ್ನು ಭಯೋತ್ಪಾದನಾ ವಿರೋಧಿ ನ್ಯಾಯಾಲವೊಂದು ನಾಲ್ಕು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದೆ.

ವಾಯುವ್ಯ ಪ್ರಾಂತ್ಯ ಹಾಗೂ ರಾವಲ್ಪಿಂಡಿಯಲ್ಲಿ ಬಂಧನಕ್ಕೀಡಾಗಿರುವ ಐತ್‌ಝಾಜ್ ಶಾ, ಶೇರ್ ಝಮಾನ್, ಅಬ್ದುಲ್ ರಶೀದ್, ಹಸ್ನೇನ್ ಗುಲ್ ಮತ್ತು ರಫಾಕತ್ ಅವರುಗಳನ್ನು ರಾವಲ್ಪಿಂಡಿಯ ನ್ಯಾಯಾಲಯದಲ್ಲಿ ಬಿಗಿ ಭದ್ರತೆಯೊಂದಿಗೆ ಹಾಜರು ಪಡಿಸಲಾಯಿತು. ಬಳಿಕ ಅವರನ್ನು ಅಡಿಯಾಲ ಜೈಲಿಗೆ ಕಳುಹಿಸಲಾಗಿದೆ.

ಬಿಲಾಲ್ ಹಾಗೂ ಪರಾರಿಯಾಗಿರುವ ಆತನ ಸಹಚರ ಇಕ್ರಮುಲ್ಲನಿಗೆ ಗುಲ್ ಹಾಗೂ ಆತನ ಸಂಬಂಧಿ ರಫಕತ್ ಅವರುಗಳು ಶಸ್ತ್ರಸ್ತ್ರ ಹಾಗೂ ಸ್ಫೋಟಕಗಳನ್ನು ಒದಗಿಸಿದ್ದಾರೆ ಎಂದು ಆಪಾದಿಸಲಾಗಿದೆ. ಈ ಐವರಿಗೆ ಇತರ ಆತ್ಮಾಹುತಿ ದಾಳಿ ಹಾಗೂ ಬಾಂಬ್ ಸ್ಪೋಟಗಳಿಗೆ ಸಂಪರ್ಕವಿದೆ ಎಂದೂ ಹೇಳಲಾಗಿದೆ.
ಮತ್ತಷ್ಟು
ಕಾಶ್ಮೀರ್ ಸಿಂಗ್‌ನಷ್ಟು ಅದೃಷ್ಟವಿಲ್ಲ ಸರಬ್‌ಜಿತ್‌ಗೆ
ಪಿಪಿಪಿಯಿಂದ ಸಚಿವರ ಪಟ್ಟಿ ಅಂತಿಮ
ಪಾಕ್ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಯುಎಸ್ ನಕಾರ
ಸಿಡಿದೆದ್ದು ನಿಂತ ಹಿಲರಿ; ಒಬಾಮಾಗೆ ಮುನ್ನಡೆ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ
ರಕ್ಷಣಾವೆಚ್ಚ: ಭಾರತವನ್ನು ಉದಾಹರಿಸಿದ ಚೀನ