ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೊ ಅಭಿಯಾನ ಮುಂದುವರಿಸುವೆ: ಜರ್ದಾರಿ
PTI
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಮುದಾಯಕ್ಕೆ ಶುಭಾಶಯ ಕೋರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಅವರ ಪತಿ ಅಸಿಫ್ ಅಲಿ ಜರ್ದಾರಿ ಅವರು, ಪಾಕಿಸ್ತಾನಿ ಮಹಿಳೆಯರ ಉನ್ನತಿಗಾಗಿ ತನ್ನ ಪತ್ನಿಯ ಅಭಿಯಾನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಪಕ್ಷಪಾತಿತನದ ಕಾನೂನಿನ ಅವಮಾನ ಮತ್ತು ಯಾತನೆಯಿಂದ ಮಹಿಳೆಯರನ್ನು ಹೊರತರಲು ಪಕ್ಷಬೇಧ ಮರೆತು ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ತಾನು ಈ ಸಂದರ್ಭಗಳಲ್ಲಿ ಕರೆನೀಡುವುದಾಗಿ ಜರ್ದಾರಿ ನುಡಿದರು.

ಮಹಿಳಾ ಹಕ್ಕುಗಳನ್ನು ಧಾರ್ಮಿಕ, ನೈತಿಕ ಮತ್ತು ರಾಜಕೀಯ ಬಾಧ್ಯತೆಯಾಗಿ ಉನ್ನತೀಕರಣಕ್ಕೆ ಯತ್ನಿಸುವುದಾಗಿ ಪಿಪಿಪಿ ಪಕ್ಷದ ಸಹ-ಅಧ್ಯಕ್ಷ ಹೇಳಿದರು.

ಮಹಿಳಾ ಔನ್ನತ್ಯದ ಕುರಿತು ತಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ತಳೆದಿದ್ದ ಧೋರಣೆಯು ಹಾಗೇ ಮುಂದುವರಿಯಲಿದೆ ಎಂದು ಜರ್ದಾರಿ ನುಡಿದರು.
ಮತ್ತಷ್ಟು
ಭಾರತ ನಿಕಟ ಸ್ನೇಹಿ: ಶ್ರೀಲಂಕ
ಮುಶ್ ಕೇಂದ್ರೀಕೃತ ನೀತಿ ಬದಲಿಸುವೆ: ಹಿಲರಿ
ಬೆನಜೀರ್ ಹತ್ಯೆ: 5 ಶಂಕಿತರಿಗೆ ನ್ಯಾಯಾಂಗ ಬಂಧನ
ಕಾಶ್ಮೀರ್ ಸಿಂಗ್‌ನಷ್ಟು ಅದೃಷ್ಟವಿಲ್ಲ ಸರಬ್‌ಜಿತ್‌ಗೆ
ಪಿಪಿಪಿಯಿಂದ ಸಚಿವರ ಪಟ್ಟಿ ಅಂತಿಮ
ಪಾಕ್ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಯುಎಸ್ ನಕಾರ