ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಆರ್ಥಿಕ ಹಿಂಜರಿತ: 63,000 ಉದ್ಯೋಗ ಬಲಿ
PTI
ಅಮೆರಿಕದ ಆರ್ಥಿಕತೆಯ ನಿಧಾನಗತಿಯಿಂದಾಗಿ ಅಲ್ಲಿನ ಒಟ್ಟು 63,000 ಉದ್ಯೋಗಿಳ ವೃತ್ತಿಗೆ ಸಂಚಾಕಾರ ಒದಗಿದೆ. ಇದು ಕಳೆದ ಐದು ವರ್ಷಗಳಲ್ಲೇ ಕೆಲಸ ಕಳಕೊಂಡವರ ಅತಿದೊಡ್ಡ ಸಂಖ್ಯೆಯಾಗಿದೆ.

"ಕೆಲಸ ಕಳೆದುಕೊಳ್ಳುವುದು ನೋವಿನ ವಿಚಾರ. ಅಮರಿಕನ್ನರು ನಮ್ಮ ಆರ್ಥಿಕತೆಯ ಕುರಿತು ಕಳವಳವಳಗೊಂಡಿದ್ದಾರೆಂದು ತನಗೆ ಗೊತ್ತು" ಎಂಬುದಾಗಿ ಬುಶ್ ಹೇಳಿದ್ದಾರೆ. ನಮ್ಮ ಆರ್ಥಿಕತೆಯ ಸಂಕಷ್ಟದ ಕಾಲ, ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ನಾವು ಕಂಡುಕೊಂಡಿದ್ದೇವೆ ಮತ್ತು ಇದರ ಪರಿಹಾರಕ್ಕಾಗಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ತೆರಿಗೆದಾರರಿಗೆ ಅಮೆರಿಕ ಕಾಂಗ್ರೆಸ್‌ ನೀಡಿರುವ ತೆರಿಗೆ ವಿನಾಯಿತಿಯನ್ನು ಉಳಿಸಬೇಡಿರಿ ಎಂದು ಹೇಳಿರುವ ಬುಶ್, ಇದನ್ನು ವ್ಯಯಿಸಿ ಎಂದಿದ್ದಾರೆ. ನೀವಿದನ್ನು ವ್ಯಯಿಸಿದಾಗ ಹಣವು ಅಮೆರಿಕದ ಜನತೆಗೆ ತಲುಪುತ್ತದೆ ಮತ್ತು ಇದರಿಂದ ಗ್ರಾಹಕರ ವ್ಯಯಿಸುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅವರು ತೆರಿಗೆಪಾವತಿದಾರರಿಗೆ ಕರೆ ನೀಡಿದ್ದಾರೆ.
ಮತ್ತಷ್ಟು
ಭುಟ್ಟೊ ಅಭಿಯಾನ ಮುಂದುವರಿಸುವೆ: ಜರ್ದಾರಿ
ಭಾರತ ನಿಕಟ ಸ್ನೇಹಿ: ಶ್ರೀಲಂಕ
ಮುಶ್ ಕೇಂದ್ರೀಕೃತ ನೀತಿ ಬದಲಿಸುವೆ: ಹಿಲರಿ
ಬೆನಜೀರ್ ಹತ್ಯೆ: 5 ಶಂಕಿತರಿಗೆ ನ್ಯಾಯಾಂಗ ಬಂಧನ
ಕಾಶ್ಮೀರ್ ಸಿಂಗ್‌ನಷ್ಟು ಅದೃಷ್ಟವಿಲ್ಲ ಸರಬ್‌ಜಿತ್‌ಗೆ
ಪಿಪಿಪಿಯಿಂದ ಸಚಿವರ ಪಟ್ಟಿ ಅಂತಿಮ