ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೂಕಿ 2010 ಚುನಾವಣೆಗೆ ಇಲ್ಲ
ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿಯವರು ಚುನಾವಣೆಗೆ ಸ್ಫರ್ಧಿಸಲು ಅನುಕೂಲವಾಗುವಂತೆ ಕರಡು ಸಂವಿಧಾನಕ್ಕೆ ತಿದ್ದುಪಡಿ ಇಲ್ಲ ಎಂದು ಮ್ಯಾನ್ಮಾರ್‌ನ ಆಡಳಿತಾರೂಢ ಜುಂತಾವು ವಿಶ್ವಸಂಸ್ಥೆಯ ರಾಯಭಾರಿ ಇಬ್ರಾಹಿಂ ಗಂಬಾರಿಯವರಿಗೆ ಹೇಳಿರುವುದಾಗಿ ಶನಿವಾರದ ಮಾಧ್ಯಮ ವರದಿಗಳು ಹೇಳಿವೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಸೂಕಿಯವರ ಸೇರ್ಪಡೆಗಾಗಿ ಸಂವಿಧಾನ ತಿದ್ದುಪಡಿ ಮಾಡಿರುವ ಮನವಿಯನ್ನು ತಳ್ಳಿಹಾಕಿರುವುದಾಗಿ ಮಾಹಿತಿ ಸಚಿವ ಬ್ರಿಗೇಡಿಯರ್ ಜನರಲ್ ಕ್ಯಾವ್ ಹಸ್ನ್, ಮ್ಯಾನ್ಮಾರ್ ಭೇಟಿಯಲ್ಲಿರುವ ಗಂಬಾರಿಯವರಿಗೆ ಸುದೀರ್ಘ ಉಪನ್ಯಾಸದಲ್ಲಿ ಹೇಳಿರುವುದಾಗಿ ಸರಕಾರಿ ನಿಯಂತ್ರಿತ ಮಾಧ್ಯಮಗಳು ವರದಿ ಮಾಡಿವೆ.

ಸಂವಿಧಾನವನ್ನು ಈಗಾಗಲೇ ರೂಪಿಸಲಾಗಿದ್ದು, ಇದಕ್ಕೆ ತಿದ್ದುಪಡಿ ಸಾಧ್ಯವಿಲ್ಲ ಎಂದು ಕ್ಯಾವ್ ಹಸ್ನ್ ಹೇಳಿದ್ದಾರೆ. ಮಾನ್ಮಾರ್ ಸೇನಾ ಮುಖ್ಯಸ್ಥ ಜನರಲ್ ಥಾನ್ ಶ್ವೆ ಅವರಿಗೆ ಫೆ.19ರಂದು ಬಾನ್ ಕಿ ಮೂನ್ ಬರೆದಿರುವ ಪತ್ರದಲ್ಲಿ ವಿದೇಶಿಯರನ್ನು ವಿವಾಹವಾಗಿರುವ ಮ್ಯಾನ್ಮಾರ್ ಪ್ರಜೆಗಳನ್ನು ಚುನಾವಣೆಯಿಂದ ಹೊರಗಿರಿಸುವ ಪರಿಚ್ಛೇದವನ್ನು ಕೈಬಿಡುವಂತೆ ಕೇಳಿದ್ದರು.

ನೋಬೆಲ್ ಪ್ರಶಸ್ತಿ ವಿಜೇತೆ, ಪ್ರಜಾಪ್ರಭುತ್ವ ಹೋರಾಟಗಾರ್ತಿ 2003ರಿಂದ ಗೃಹ ಬಂಧನದಲ್ಲಿರುವ ಸೂಕಿಯವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಬ್ರಿಟಿಷ್ ಪ್ರೋಫೆಸರ್ ಆಗಿದ್ದ, ದಿವಂಗತ ಮೈಖೆಲ್ ಏರಿಸ್ ಅವರನ್ನು ವಿವಾಹವಾಗಿದ್ದರು.
ಮತ್ತಷ್ಟು
ಅಮೆರಿಕ ಆರ್ಥಿಕ ಹಿಂಜರಿತ: 63,000 ಉದ್ಯೋಗ ಬಲಿ
ಭುಟ್ಟೊ ಅಭಿಯಾನ ಮುಂದುವರಿಸುವೆ: ಜರ್ದಾರಿ
ಭಾರತ ನಿಕಟ ಸ್ನೇಹಿ: ಶ್ರೀಲಂಕ
ಮುಶ್ ಕೇಂದ್ರೀಕೃತ ನೀತಿ ಬದಲಿಸುವೆ: ಹಿಲರಿ
ಬೆನಜೀರ್ ಹತ್ಯೆ: 5 ಶಂಕಿತರಿಗೆ ನ್ಯಾಯಾಂಗ ಬಂಧನ
ಕಾಶ್ಮೀರ್ ಸಿಂಗ್‌ನಷ್ಟು ಅದೃಷ್ಟವಿಲ್ಲ ಸರಬ್‌ಜಿತ್‌ಗೆ