ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿನ ಪ್ರಚಂಡ ಗೆಲುವು ರಷ್ಯಾದ ಸಮಸ್ಯೆಗಳ ಪರಿಹಾರಕ್ಕೆ ಆದೇಶ ನೀಡಿದೆ ಎಂದು ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿಮಿಟ್ರೆ ಮೆಡ್ವಡೇವ್ ಹೇಳಿದ್ದಾರೆ.
ರಾಷ್ಟ್ರದ ಪ್ರಜೆಗಳ ಜೀವನ ಮಟ್ಟದ ಸುಧಾರಣೆಗಾಗಿ, ರಾಷ್ಟ್ರವು ಎದುರಿಸುತ್ತಿರುವ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ನಂಬುಗೆ ಹೊರೆಯನ್ನು ನೀಡಿದೆ ಎಂದು ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಮೆಡ್ವೆಡೇವ್ ಉಪಪ್ರಧಾನಿಯಾಗಿದ್ದಾಗ ಮತ್ತು ಚುನಾವಣಾ ಪ್ರಚಾರದ ವೇಳೆಗೆ ಹೆಚ್ಚು ಉದಾರಿಯಂತೆ ಮತ್ತು ವ್ಲಾಡಿಮಿರ್ ಪುಟಿನ್ ಅವರ ಸಾಮಾಜಿಕ ಆವೃತ್ತಿಯಂತೆ ಕಂಡು ಬಂದಿದ್ದರು.
|