ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾಗೆ ವ್ಯೂಮಿಂಗ್ ಕ್ಯಾಕಸ್ ಗೆಲವು
ಅಮೆರಿಕದ ಅಧ್ಯಕ್ಷೀಯ ಚುನಾವಣಾಕಾಂಕ್ಷಿ ಬಾರಕ್ ಒಬಾಮ, ವ್ಯೂಮಿಂಗ್ ಕಾಕಸ್‌ನಲ್ಲಿ ತನ್ನ ವಿರೋಧಿ, ನ್ಯೂಯಾರ್ಕ್ ಸೆನೆಟ್ ಸದಸ್ಯೆ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿದ್ದಾರೆ.

ಒಬಾಮ ಅವರು ಕಾಕಸ್‌ನಲ್ಲಿ ನಡೆದಿರುವ ಮತದಾನದಲ್ಲಿ ಶೇ.58 ಮತಗಳಿಸಿದ್ದರೆ, ಹಿಲರಿ ಶೇ41ರಷ್ಟು ಮತಗಳನ್ನು ಪಡೆದಿದ್ದಾರೆ. ರಾಜ್ಯಾದ್ಯಂತದ 29 ಕೌಂಟಿಗಳಲ್ಲಿ ನಡೆದ ಮತದಾನದಲ್ಲಿ ಸುಮಾರು 60 ಸಾವಿರ ಡೆಮಾಕ್ರೆಟ್‌ಗಳು ಪಾಲ್ಗೊಂಡಿದ್ದರು.

ಇಲ್ಲಿನ ಗೆಲವು ಅಂತಹ ಮಹತ್ವದ್ದೇನು ಅಲ್ಲವಾಗಿದ್ದರೂ, ಒಹಿಯೋ, ಟೆಕ್ಸಾಸ್ ಮತ್ತು ರೋಡೆ ದ್ವೀಪದಲ್ಲಿ ಹಿಲರಿಯ ಗೆಲುವು ನೀಡಿದ ಹೊಡೆತದಿಂದ ಚೇತರಿಕೆ ನೀಡಿದೆ. ಅಧಿಕ ಪ್ರತಿನಿಧಿಗಳಿರುವ ಒಹಿಯೋ ಮತ್ತು ಟೆಕ್ಸಾಸ್‌ಗಳಲ್ಲಿನ ಗೆಲವು ಹಿಲರಿಗೆ ಹೊಸ ಚೇತನ ನೀಡಿದೆ. ಇಲ್ಲಿ ಯಾವುದಾದರೂ ಒಂದು ಸ್ಥಾನದಲ್ಲಿ ಒಬಾಮ ಗೆಲ್ಲುತ್ತಿದ್ದರೆ, ಹಿಲರಿಯವರ ಅಧ್ಯಕ್ಷೀಯ ಆಸೆ ಅಲ್ಲಿಗೆ ಕಮರುತ್ತಿತ್ತು.

ಮುಂದಿನ ಮಂಗಳವಾರ ಡೆಮೆಕ್ರಾಟ್‌ಗಳು ಮಿಸ್ಸಿಸಿಪ್ಪಿಯಲ್ಲಿ ಚುನಾವಣೆ ಎದುರಿಸಲಿದ್ದಾರೆ. ಅಲ್ಲಿ ಸೆನೆಟರ್ ಒಬಾಮರತ್ತ ಹೆಚ್ಚಿನ ಒಲವು. ಮಿಸ್ಸಿಸಿಪ್ಪಿಯು 33 ಪ್ರತಿನಿಧಿಗಳನ್ನು ಚುನಾಯಿಸಲಿದೆ. ಇಲ್ಲಿ ಶೇ.40ರಷ್ಟು ಆಫ್ರಿಕ-ಅಮೆರಿಕನ್ನರಿದ್ದಾರೆ. ಪ್ರಾಥಮಿಕ ಚುನಾವಣೆಯಲ್ಲಿ ಒಬಾಮರಿಗೆ ಅಧಿಕ ಮತಗಳು ಬಿದ್ದಿದ್ದವು.
ಮತ್ತಷ್ಟು
ರಾಷ್ಟ್ರದ ಸಮಸ್ಯೆ ಪರಿಹರಿಸುವೆ: ಮೆಡ್ವಡೇವ್
ಸೂಕಿ 2010 ಚುನಾವಣೆಗೆ ಇಲ್ಲ
ಅಮೆರಿಕ ಆರ್ಥಿಕ ಹಿಂಜರಿತ: 63,000 ಉದ್ಯೋಗ ಬಲಿ
ಭುಟ್ಟೊ ಅಭಿಯಾನ ಮುಂದುವರಿಸುವೆ: ಜರ್ದಾರಿ
ಭಾರತ ನಿಕಟ ಸ್ನೇಹಿ: ಶ್ರೀಲಂಕ
ಮುಶ್ ಕೇಂದ್ರೀಕೃತ ನೀತಿ ಬದಲಿಸುವೆ: ಹಿಲರಿ