ಭಯೋತ್ಪಾದನೆ, ಅಕ್ರಮ ಆಯುಧ, ಬಾಂಬ್. ಶಸ್ತ್ರಾಸ್ತ್ರ ರವಾನೆ ಇತ್ಯಾದಿ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚಾಗುತ್ತಿದೆ. ಭದ್ರತಾ ಪಡೆಗಳಿಗೆ ಉಗ್ರಗಾಮಿಗಳನ್ನು ಪತ್ತೆ ಹಚ್ಚುವುದೇ ದೊಡ್ಡ ತಲೆನೋವಿನ ಸಂಗತಿ. ಹೀಗಾಗಿ ಇಂಗ್ಲೆಂಡ್ ವಿಜ್ಞಾನಿಗಳೊಂದು ಕ್ರಾಂತಿಕಾರಕ ಸಾಧನವೊಂದನ್ನು ಕಂಡುಹುಡುಕಿದ್ದಾರೆ... ಅದೇನು ಮಾಡುತ್ತದೆ ಗೊತ್ತೇ?ಉಸಿರು ಬಿಗಿ ಹಿಡಿದುಕೊಳ್ಳಿ... ಇದೊಂದು ಕ್ಯಾಮರಾ. 80 ಅಡಿ ದೂರದಿಂದ ಈ ಕ್ಯಾಮರಾ ಮೂಲಕ ನೋಡಿದರೆ ಉಟ್ಟ ಬಟ್ಟೆಯೊಳಗೆ ಏನೇನಿದೆ ಎಂಬುದೆಲ್ಲಾ ಕಾಣಿಸುತ್ತದೆಯಂತೆ!ಹೌದು. ಇದು ಪಡ್ಡೆಗಳಿಗೆ ರೋಮಾಂಚಕಾರಿ ಸಂಗತಿಯಾದರೂ... ಬಾಂಬ್ ಸ್ಫೋಟ, ಹಾಡಹಗಲೇ