ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಸೀನಾ ಕಿವುಡಿಯಾಗುವ ಸಾಧ್ಯತೆ :ವರದಿ
ಅಕ್ರಮ ಸಂಪಾದನೆಯ ಆರೋಪದ ಮೇಲೆ ಕಳೆದ ಎಂಟು ತಿಂಗಳ ಹಿಂದೆ ಮಿಲಿಟರಿ ಬೆಂಬಲಿತ ಮಧ್ಯ ಸರಕಾರದಿಂದ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿದೇಶದಲ್ಲಿ ತಕ್ಷಣ ಚಿಕಿತ್ಸೆ ನೀಡದಿದ್ದಲ್ಲಿ ಸಂಪೂರ್ಣ ಕಿವುಡರಾಗುವ ಸಾಧ್ಯತೆ ಇದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳು ಹೇಳಿದ್ದಾರೆ.

2004ರಲ್ಲಿ ಪಕ್ಷದ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಸಂಭವಿಸಿದ ಗ್ರೆನೆಡ್ ಸ್ಪೋಟದಲ್ಲಿ ಶೇಖ್ ಹಸೀನಾ ಗಾಯಗೊಂಡಿದ್ದರು. 60 ವರ್ಷದ ಅವಾಮಿ ಲೀಗ್ ಮುಖ್ಯಸ್ಥೆ ಹಸೀನಾ ಅವರಿಗೆ ಈಗ ಜೈಲಿನ ಆವರಣದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹಸೀನಾ ಅವರಿಗೆ ವೈದ್ಯಕೀಯ ಉಪಚಾರ ನೀಡುತ್ತಿರುವ ಡಾ. ಪ್ರಾಣ್ ಗೋಪಾಲ್ ಗುಪ್ತಾ ಅವರು ಇಲ್ಲಿ ಚಿಕಿತ್ಸೆ ನೀಡಲು ಸರಿಯಾದ ಸೌಲಭ್ಯಗಳಿಲ್ಲದ ಕಾರಣ ಹಸೀನಾರಿಗೆ ವಿದೇಶದಲ್ಲಿ ಚಿಕಿತ್ಸೆ ನೀಡಬೇಕಿದೆ. ಇಲ್ಲದೇ ಹೋದಲ್ಲಿ ಅವರು ಜೀವಮಾನ ಪೂರ್ತಿ ಕಿವುಡಿಯಾಗಿ ಇರುವ ಸಾಧ್ಯತೆ ಇದೆ, ಈಗಾಗಲೇ ಅವರ ಎಡಗಿವಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ, ಬಲಗಿವಿ ದುರ್ಬಲವಾಗುತ್ತಿದೆ ಎಂದು ಹೇಳಿದ್ದಾರೆ.

ಭೃಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ಶೇಖ್ ಹಸೀನಾ ಕಳಾಹೀನವಾಗಿದ್ದರು ಎಂದು ನ್ಯಾಯವಾದಿಗಳು ವಿಷಾದ ವ್ಯಕ್ತಪಡಿಸಿದರು. ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಾಧೀಶರಾದ ಫಿರೋಜ್ ಅಲಮ್ ಅವರು ಆರೋಪಿ ಸ್ಥಾನದಲ್ಲಿ ನಿಂತಿರುವ ಹಸೀನಾ ಇಚ್ಚಿಸಿದಲ್ಲಿ ನ್ಯಾಯಾಲಯದಿಂದ ಹೋರಗೆ ಹೋಗಬಹುದು, ವಿಚಾರಣೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಿರುವುದರಿಂದ ವಿಚಾರಣೆ ಮುಂದುವರಿಯಲಿ ಎಂದು ಹೇಳಿದರು.
ಮತ್ತಷ್ಟು
ಬಟ್ಟೆಯೊಳಗೆ ಏನಿದೇಂತ ಪತ್ತೆ ಹಚ್ಚೋ ಕ್ಯಾಮರಾ!
ಒಬಾಮಾಗೆ ವ್ಯೂಮಿಂಗ್ ಕ್ಯಾಕಸ್ ಗೆಲವು
ರಾಷ್ಟ್ರದ ಸಮಸ್ಯೆ ಪರಿಹರಿಸುವೆ: ಮೆಡ್ವಡೇವ್
ಸೂಕಿ 2010 ಚುನಾವಣೆಗೆ ಇಲ್ಲ
ಅಮೆರಿಕ ಆರ್ಥಿಕ ಹಿಂಜರಿತ: 63,000 ಉದ್ಯೋಗ ಬಲಿ
ಭುಟ್ಟೊ ಅಭಿಯಾನ ಮುಂದುವರಿಸುವೆ: ಜರ್ದಾರಿ