ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವಂತೆ ವೆಚ್ಚದಲ್ಲಿ ಕೂಡಾ ಹೆಚ್ಚಳವಾಗುತ್ತಿದೆ ಪ್ರತಿ ತಿಂಗಳಿಗೆ 12ಬಿಲಿಯನ್ ಡಾಲರ್ ವೆಚ್ಚವಾಗುತ್ತಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಯುದ್ಧದಿಂದಾಗಿ ವೆಚ್ಚದಲ್ಲಿ ತ್ರೀಗುಣವಾಗಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ , ನೋಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಎ. ಸ್ಟಾಗ್ಲಿಟ್ಜ್ ತಿಳಿಸಿದ್ದಾರೆ.
ಇರಾಕ್ ಮತ್ತು ಅಫಘಾನ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ 2017ರವರೆಗೆ ಕೊನೆಗಾಣದಿದ್ದಲ್ಲಿ ಅಮೆರಿಕ ತನ್ನ ಬಜೆಟ್‌ನಲ್ಲಿ 1.7 ಟ್ರಿಲಿಯನ್ ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯುದ್ದದ ವೆಚ್ಚವನ್ನು ಭರಿಸಲು ತಂದ ಮೊತ್ತದ ಬಡ್ಡಿದರ 816 ಬಿಲಿಯನ್ ಡಾಲರ್‌ಗಳಾಗಿದೆ ಎಂದು ವೆಚ್ಚದ ವಿವರಣೆ ನೀಡಿದ್ದಾರೆ.
|