ದೇಶದಲ್ಲಿ ನಡೆದ ಇತ್ತಿಚಿನ ಚುನಾವಣೆಗಳಲ್ಲಿ ಸಮಾಜವಾದಿ ಪ್ರದಾನಿ ಜೊಸ್ ಲೂಯಿಸ್ ರೊಡ್ರಿಗ್ಜ್ ಅವರು ಪುನರಾಯ್ಕೆಯಾಗಿದ್ದಾರೆ.
ರೋಮನ್ ಕ್ಯಾಥೋಲಿಕ್ ಪ್ರಭಾವಿ ದೇಶವಾದ ಸ್ಪೇನ್‌ನಲ್ಲಿ ಸಲಿಂಗ ವಿವಾಹವನ್ನು ಕಾನುನೂ ಬದ್ದವಾಗಿ ಸಂವಿಧಾನ ತಿದ್ದುಪಡಿಗೆ ತಂದು ದೇಶದ ಜನರ ಅಚ್ಚರಿಗೆ ಕಾರಣವಾಗಿದ್ದರು.
ಇರಾಕ್‌ನಿಂದ ತಮ್ಮ ದೇಶದ ಸೇನೆಯನ್ನು ಹಿಂದಕ್ಕೆ ತೆಗೆದುಕೊಂಡು ವಿದೇಶಾಂಗ ನೀತಿಗಳಲ್ಲಿ ವ್ಯಾಪಕ ಬದಲಾವಣೆಗೆಳನ್ನು ತರುವಲ್ಲಿ ಯಶಸ್ವಿಯಾಗಿದ್ದರು.
ದೇಶದಲ್ಲಿ ಒಟ್ಟು ಶೇ 99.4ರಷ್ಟು ಮತದಾನವಾಗಿದ್ದು ಪ್ರದಾನಿ ಜೊಸ್ ಲೂಯಿಸ್ ರೊಡ್ರಿಗ್ಜ್ ಅವರ ಸಮಾಜವಾದಿ ಪಕ್ಷಕ್ಕೆ ಶೇ 43.7ರಷ್ಟು ಮತಗಳು ಲಭಿಸಿದ್ದು, ವಿರೋಧಪಕ್ಷಕ್ಕೆ 40.1 ಮತಗಳು ಲಭಿಸಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
|