ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಹ ಸರಕಾರ ರಚನೆಗೆ ಅಗತ್ಯವಿರುವ ಬಹುಮತದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಅಬ್ದುಲ್ಲಾ ಅಹ್ಮದ್ ಬದವೈ ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಾಂಪ್ರದಾಯಕ ಉಡುಪುಗಳನ್ನು ಧರಿಸಿದ ಪ್ರಧಾನಿ ಕೌಲಾಲುಂಪುರ್‌ನ ರಾಯಲ್ ಪ್ಯಾಲೇಸ್‌ನಲ್ಲಿ ಪ್ರಧಾನಿಯಾಗಿ ರಾಜರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪಪ್ರಧಾನಿ ನಜೀಬ್ ರಝಾಕ್ ಮತ್ತು ಹಿರಿಯ ಸಚಿವರುಗಳು ಉಪಸ್ಥಿತರಿದ್ದರು.
ಅಬ್ದುಲ್ಲಾ ಅಹ್ಮದ್ ಬದವೈ ಪಕ್ಷ ಶನಿವಾರದಂದು ನಡೆದ ಚುನಾವಣೆಯಲ್ಲಿ 1969ರ ನಂತರ ಪ್ರಥಮ ಬಾರಿಗೆ ಎರಡನೇಯ ಮೂರರಷ್ಟು ಬಹುಮತವನ್ನು ಕಳೆದುಕೊಂಡು ನಾಲ್ಕು ರಾಜ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಜನಾಂಗೀಯ ಉದ್ರಿಕ್ತತೆ ಹಾಗೂ ಚೀನಾ ಹಾಗೂ ಭಾರತೀಯ ಮತ್ತು ಮುಸ್ಲಿಮ್‌ರ ವಿರೋಧ ಕಟ್ಟಿಕೊಂಡ ಹಿನ್ನೆಲೆಯಲ್ಲಿ ಸರಕಾರಕ್ಕೆ ಭಾರಿ ಸೋಲು ಎದುರಿಸಬೇಕಾಗಿದೆ ಎಂದು ವಿರೋಧ ಪಕ್ಷಗಳು ತಿಳಿಸಿವೆ.
|