ಪಾಕೀಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್ ಮುಖ್ಯಸ್ಥ ಮಾಜಿ ಪ್ರಧಾನಿ ನವಾಜ್ ಷರೀಫ್ ಜಂಟಿ ಘೋಷಣಾ ಪತ್ರಕ್ಕೆ ಹಸ್ತಾಕ್ಷರ ಹಾಕಿದ್ದಾರೆ.
ಫೆಬ್ರವರಿ 18ರಂದು ನಡೆದ ಚುನಾವಣಾ ಫಲಿತಾಂಶದಲ್ಲಿ ಜನರು ಸಮ್ಮಿಶ್ರ ಸರಕಾರ ರಚನೆಗೆ ಸಮ್ಮತಿ ನೀಡಿದ್ದರಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಉಭಯ ಪಕ್ಷಗಳು ಸಿದ್ದ ಎಂದು ಘೋಷಿಸಿವೆ.
ಪಾಕೀಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್ ಮುಖ್ಯಸ್ಥ ಮಾಜಿ ಪ್ರಧಾನಿ ನವಾಜ್ ಷರೀಫ್ ಇಂದು ಸಭೆ ಸೇರಿ ಸರಕಾರ ರಚನೆಯಾಗಿ 30 ದಿನಗಳ ನಂತರ ಅಮಾನತ್ತುಗೊಂಡ ನ್ಯಾಯಾಧೀಶರನ್ನು ಮರುನೇಮಕ ಮಾಡುವಂತೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಉಭಯ ಪಕ್ಷಗಳ ಧುರೀಣರು ತಿಳಿಸಿದ್ದಾರೆ.
ಪ್ರಧಾನಿ ಹುದ್ದೆಯ ಅಭ್ಯರ್ಥಿ ಉಭಯ ಪಕ್ಷಗಳ ಸಾಮಾನ್ಯ ಕ್ರಿಯಾ ಯೋಜನೆಯನ್ನು ಅನುಸರಿಸುವ ಅಗತ್ಯವಿದೆ ಎಂದು ಉಭಯಪಕ್ಷಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
|