ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ: ಘರ್ಷಣೆಯಲ್ಲಿ 32 ಮಂದಿ ಸಾವು
ಶ್ರೀಲಂಕಾದ ಉತ್ತರ ಭಾಗದಲ್ಲಿ ಸೇನಾಪಡೆಗಳ ಹಾಗೂ ತಮಿಳು ಉಗ್ರರ ಘರ್ಷಣೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನಾವಕ್ತಾರರು ತಿಳಿಸಿದ್ದಾರೆ.

ಜಾಫ್ನಾದ ಆಗ್ನೆಯ ಭಾಗದಲ್ಲಿರುವ ಮನ್ನಾರ್ ಪ್ರದೇಶದಲ್ಲಿರುವ ಉಗ್ರರ ಮೇಲೆ ಭೂದಾಳಿ ಹಾಗೂ ವಾಯು ದಾಳಿ ನಡೆಸಿದ ಸೇನಾಪಡೆಗಳು 10 ಮಂದಿ ಉಗ್ರರನ್ನು ಕೊಂದು ಹಾಕಿವೆ. ಘರ್ಷಣೆಯಲ್ಲಿ ಮೂವರು ಸೈನಿಕರು ಹತರಾಗಿದ್ದು 10 ಮಂದಿಗೆ ಗಾಯಗಳಾಗಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ವಾಯುನಿಯಾ ಪ್ರಾಂತ್ಯದ ಕರಂಪೆಕುಲಂ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸೇರಿದಂತೆ ಒಬ್ಬ ಸೈನಿಕನು ಹತರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ಯಾವುನಿಯಾದ ಪಲೈಮೊಡ್ಡೈ ಪ್ರದೇಶದ ಮೇಲೆ ದಾಳಿ ನಡೆಸಿದ ಸೇನಾಪಡೆಗಳು ನಾಲ್ವರು ಉಗ್ರರನ್ನು ಕೊಂದು ಹಾಕಿವೆ ಪೆರಿಯಾವಲಾನ್‌ನ ಕಡ್ಡುಕುಲಂ ಪ್ರದೇಶದಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು
ಪಿಪಿಪಿ, ಪಿಎಂಎಲ್ ಜಂಟಿ ಘೋಷಣೆ
ಮಲೇಷಿಯಾ ಪ್ರಧಾನಿ ಪ್ರಮಾಣ ವಚನ ಸ್ವೀಕಾರ
ಸ್ಪೇನ್ ಪ್ರಧಾನಿ ಪುನರಾಯ್ಕೆ
ಇರಾಕ್ ಯುದ್ದಕ್ಕೆ ತಿಂಗಳಿಗೆ 12 ಬಿಲಿಯನ್ ಡಾಲರ್ ವೆಚ್ಚ
ಹಸೀನಾ ಕಿವುಡಿಯಾಗುವ ಸಾಧ್ಯತೆ :ವರದಿ
ಬಟ್ಟೆಯೊಳಗೆ ಏನಿದೇಂತ ಪತ್ತೆ ಹಚ್ಚೋ ಕ್ಯಾಮರಾ!