ಪೂರ್ವಪಾಕಿಸ್ತಾನದ ಫೆಡರಲ್ ಪೊಲೀಸ್ ಕಚೇರಿಯ ಮೇಲೆ ನಡೆಸಿರುವ ಬಾಂಬ್ ದಾಳಿಯಲ್ಲಿ ಕನಿಷ್ಠ 12 ಮಂದಿ ಮೃತರಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ದೂರದರ್ಶನ ತಿಳಿಸಿದೆ.
ಲಾಹೋರ್‌ನಲ್ಲಿರುವ ಕೇಂದ್ರೀಯ ತನಿಖಾ ಕಚೇರಿಯಲ್ಲಿ ಸ್ಪೋಟ ಸಂಭವಿಸಿರುವುದಾಗಿ ನಗರ ಪೊಲೀಸ್ ಅಧಿಕಾರಿ ಮೊಹಮ್ಮದ್ ಖಾಲಿದ್ ತಿಳಿಸಿದ್ದಾರೆ ಆದರೆ ಸ್ಫೋಟಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಸ್ಫೋಟದಿಂದ ಗಾಯಗೊಂಡ ಹಲವಾರು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದೂರದರ್ಶನ ವರದಿ ಮಾಡಿದೆ.
ಬಹುಮಹಡಿಗಳ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು, ಕಟ್ಟಡಕ್ಕೆ ಬಾರಿ ಹಾನಿಯಾಗಿರುವ ದೃಶ್ಯಗಳನ್ನು ಖಾಸಗಿ ದೂರದರ್ಶನ ಬಿತ್ತರಿಸಿದೆ. ಅಗ್ನಿಜ್ವಾಲೆಗಳು ಕಂಡು ಬರುತ್ತಿದ್ದು, ಎಲ್ಲೆಂದರಲ್ಲಿ ಅವಶೇಷಗಳು ಚದುರಿ ಬಿದ್ದಿವೆ. ಹಲವಾರು ಕಾರುಗಳಿಗೆ ಹಾನಿಯಾಗಿದೆ.
|