ಅವರ ಸಂಬಂಧದ ಪ್ರಮುಖ ಅಂಶ ನಗು, ಹಾಸ್ಯ. ಹಾಗಾಗಿ ಅವರು ಹಾಸ್ಯದ ಮೂಲಕವೆ ಮದುವೆಯಾಗಬೇಕಿತ್ತು ಮತ್ತು ತಮ್ಮ ಇಚ್ಛೆಯನ್ನು ಪೂರೈಸಿಕೊಂಡರು ಕೂಡ.
ನ್ಯೂಯಾರ್ಕಿನ ಬ್ರಿಯಾನ್ ಆನ್‌ಸ್ಟೇ ಮತ್ತು ಎಲ್ಕಾ ಶಾಪಿರೊ ಇಬ್ಬರೂ ಹಾಸ್ಯಕಾರ್ಯಕ್ರಮ ಒಂದರ ನಿರೂಪಕಿ ಕ್ಯಾತಿ ಗ್ರಿಫಿನ್ ಅವರ ಫ್ಯಾನುಗಳು. ತಮ್ಮ ಮದುವೆಗೆ ಇವರ ಪೌರೋಹಿತ್ಯ ಬೇಕೆಂಬುದು ವಧೂವರರ ಆಸೆ ಮತ್ತು ಅಭಿಲಾಶೆ. ಹೀಗೆ ಇವರು ತಮ್ಮ ಇಚ್ಛೆಯನ್ನು ಗ್ರಿಫಿನ್ ಬಳಿ ತೋಡಿಕೊಂಡಾಗ ಒಪ್ಪಿದ ಅವರು ಲಾಸ್ ಏಂಜಲೀಸ್‌ನಿಂದ ಹಾರಿ ಬಂದರು. ಸುಮಾರು 100 ಅತಿಥಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಸುಲಗ್ನಾ ಸಾವಧಾನಾ.... ಅಂದರು.
ಗ್ರಿಫಿನ್ ನಗುನಗುತ್ತಲೇ ವಧೂವರರಿಗೆ ನೀಡಿದ ಆಶೀರ್ವಾದದಲ್ಲಿ ಮತ್ತು ಹೊಸ ದಂಪತಿಯ ದಾಂಪತ್ಯಕ್ಕೆ ಶುಭಹಾರೈಸುವಾಗ ಅದರಲ್ಲಿ ಒಂದಿಷ್ಟು ವಲ್ಗರ್ ಜೋಕ್‌ಗಳ ಒಗ್ಗರಣೆಗಳೂ ಸೇರಿದ್ದುವಂತೆ. ಅತಿಥಿಗಳು ಜೋಕುಗಳನ್ನೂ ಚಪ್ಪರಿಸುವಂತೆ ಮಾಡಿದರು.
ವಿವಾಹಕ್ಕೆ ಆಗಮಿಸಿದವರಿಗೆ ಪುಷ್ಕಳ ಭೋಜನದೊಂದಿಗೆ ಸಾಕಷ್ಟು ನಗುವನ್ನು ಉಣಬಡಿಸಲಾಗಿತ್ತು. ಮದವೆ ಆದ ಬಳಿಕ ಹೇಗೂ ಅಳೋದು, ಜಗಳವಾಡೋದು ಇದ್ದೇ ಇರುತ್ತೆ. ಅದಕ್ಕೆ ಈಗಲೇ ಸಾಕಷ್ಟು ನಕ್ಕು ಬಿಡೋಣ ಅಂತ ಈ ದಂ-ಪತಿಗಳು ತೀರ್ಮಾನಿಸಿದರೊ ಗೊತ್ತಾಗಲಿಲ್ಲ!
|