ಪೂರ್ವ ಶ್ರೀಲಂಕಾದ ನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮಾಜಿ ಎಲ್ಟಿಟಿಇ ಬಂಡುಕೋರರ ಸಮೂಹ ಗೆಲುವು ಸಾಧಿಸಿದೆ. ಕಳೆದ 14 ವರ್ಷಗಳಲ್ಲಿ ಕರುಣಾ ಸಮೂಹವು ಪಡೆಯುತ್ತಿರುವ ಮೊದಲ ಗೆಲವು ಇದಾಗಿದೆ ಎಂದು ಶ್ರೀಲಂಕಾ ದೂರದರ್ಶನ ವರದಿ ಮಾಡಿದೆ.
ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರ ಆಡಳಿತ ಮೈತ್ರಿಕೂಟದೊಂದಿಗೆ ಸೇರಿಕೊಂಡ ಕರುಣಾ ಸಮೂಹವು, ಬಟ್ಟಿಕಳೊವದಲ್ಲಿ ನಡೆದ ಚುನಾವಣೆಯಲ್ಲಿ ಶೇ.53ರಷ್ಟು ಮತಗಳನ್ನು ಗಳಿಸಿದೆ. 19ರಲ್ಲಿ 11 ಸ್ಥಾನಗಳನ್ನು ಈ ಪಡೆ ಪಡೆದುಕೊಂಡಿದೆ.
ಪೂರ್ವ ಪ್ರಾಂತ್ಯದ ತಮಿಳು ಹುಲಿಗಳ ಮಾಜಿ ನಾಯಕನ ಹೆಸರಿನ ಈ ಪಡೆಯು ಚುನಾವಣೆಯಲ್ಲಿ ಸಾಧಿಸಿರುವ ಗೆಲವು ಈ ಪ್ರಾಂತ್ಯವನ್ನು ಸುಸ್ಥಿಗೆ ಮರಳಿಸುವ ಮೊದಲ ಹೆಜ್ಜೆಯಾಗಿದೆ ಎಂದು ರಾಜಕೀಯ ವಿಮರ್ಷಕರು ಅಭಿಪ್ರಾಯಿಸಿದ್ದಾರೆ.
|