ಪಾಕಿಸ್ತಾನದ ನೂತನ ಸಂಸತ್ತಿನ ಪ್ರಥಮ ಸಭಯನ್ನು ಮಾರ್ಚ್ 17ರಂದು ನಡೆಸುವಂತೆ ಅಧ್ಯಕ್ಷ ಪರ್ವೇಜ್ ಮುಶರಫ್ ಆದೇಶ ನೀಡಿದ್ದಾರೆ. ರಾಷ್ಟ್ರೀಯ ಅಸ್ಸೆಂಬ್ಲಿ ಮಾತ್ರವಲ್ಲದೆ ಕೆಳಮನೆ,ಪ್ರಾಂತೀಯ ಅಸ್ಸೆಂಬ್ಲಿಗಳ ಅಧಿವೇಶನವನ್ನೂ ಅದೇ ನಡೆಸಲು ಆದೇಶ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪಾಕ್ ಪ್ರಧಾನಿ ಮಹೊಮ್ಮದ್‌ಮಿಯಾನ್ ಸೂಮ್ರೋ ಅವರು ಅಸ್ಸೆಂಬ್ಲಿ ಅಧಿವೇಶಕ್ಕೆ ಆದೇಶ ನೀಡುವ ದಾಖಲೆಗೆ ಸಹಿಹಾಕಿದ್ದು, ಅಂತಿಮ ಅನುಮತಿಗಾಗಿ ಅಧ್ಯಕ್ಷ ಮುಶರಫ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗೂ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ಅವರುಗಳು ಸಂಯುಕ್ತ ಸರಕಾರ ರೂಪಿಸುವ ಕುರಿತು ನಿರ್ಧಾರ ಕೈಗೊಂಡಿರುವ ಎರಡು ದಿನಗಳ ಬಳಿಕ ಸಂಸದೀಯ ಸಭೆಯ ಘೋಷಣೆ ಹೊರಬಿದ್ದಿದೆ. ಈ ಎರಡು ಪಕ್ಷಗಳು ಮುಶರಫ್ ಅವರ ಪಿಎಂಎಲ್-ಕ್ಯೂಗೆ ಭಾರಿ ಹೊಡೆತ ನೀಡಿದ್ದವು.
|