ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋಹತ್ಯೆ ನಡೆಸಲು ತಮ್ಮನಿನ್ನೂ ಚಿಕ್ಕವ: ಒಮರ್
PTI
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಕೊಲೆಗೆ ಸಂಬಂಧಿಸಿದಂತೆ ತನ್ನ ಅಫ್ಘಾನಿಸ್ತಾನ ಮೂಲದ ಕಿರಿಯ ಸಹೋದರ ಹಂಝಾನನ್ನು ಥಳುಕು ಹಾಕುವುದು ಸರಿಯಲ್ಲ ಎಂದು ಉಗ್ರವಾದಿ ಸಂಘಟನೆ ಅಲ್-ಖೈದಾದ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಪುತ್ರ ಒಮರ್ ಹೇಳಿದ್ದಾನೆ. ಅಲ್ಲದೆ ಇಂತಹ ಕೃತ್ಯಗಳನ್ನು ಎಸಗಲು ಆತನಿನ್ನೂ ತುಂಬಾ ಚಿಕ್ಕವ ಎಂದೂ ಅಭಿಪ್ರಾಯಿಸಿದ್ದಾನೆ.

ಬೆನಜೀರ್ ಭುಟ್ಟೋ ಬರೆದಿರುವ ತನ್ನ ಕೊನೆಯ ಪುಸ್ತಕ 'ರಿಕಲ್ಸಿಯೇಶನ್: ಇಸ್ಲಾಂ, ಡೆಮಾಕ್ರೆಸಿ ಆಂಡ್ ದಿ ವೆಸ್ಟ್'ನಲ್ಲಿ ಭುಟ್ಟೋ, ತನ್ನನ್ನು ಗುರಿಯಾಗಿಸಿ ಕಳುಹಿಸಲಾಗಿರುವ ನಾಲ್ಕು ಆತ್ಮಾಹುತಿ ದಾಳಿಯ ತಂಡಗಳಲ್ಲಿ, ಹಂಝಾ ತಂಡವೊಂದರ ನಾಯಕ ಎಂಬ ಮಾಹಿತಿಯನ್ನು ತಾನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

51ರ ಹರೆಯದ ಬ್ರಿಟಿಷ್ ಮಹಿಳೆಯನ್ನು ವಿವಾಹವಾಗಿ ಸುದ್ದಿಯಲ್ಲಿರುವ 26ರ ಹರೆಯದ ಒಮರ್, ಭುಟ್ಟೋ ಹತ್ಯೆಯ ಕುರಿತು ಹಂಝಾ ಮೇಲೆ ಆರೋಪ ಹೋರಿಸುವುದು ಸರಿಯಲ್ಲ, ಈ ಕೃತ್ಯ ಎಸಗಲು ಆತನಿನ್ನೂ ಚಿಕ್ಕವ ಎಂದು ಹೇಳಿದ್ದಾನೆ.

ಪಾಕಿಸ್ತಾನದ ಚಾನೆಲ್ ಫೈವ್‌ಗೆ ಕೈರೋದಿಂದ ಸಂದರ್ಶನ ನೀಡಿರುವ ಗುತ್ತಿಗೆದಾರ ಒಮರ್, ಪಾಕಿಸ್ತಾನದಲ್ಲಿನ ಆತ್ಮಾಹುತಿ ದಾಳಿಗಳೊಂದು ದುರಂತ ಎಂದಿದ್ದಾನೆ. ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ತಾನು ಪಾಕಿಸ್ತಾನ ನಾಯಕತ್ವದೊಂದಿಗೆ ಸಂವಾದ ನಡೆಸಲು ಸಿದ್ಧ ಎಂದೂ ಹೇಳಿದ್ದಾನೆ.
ಮತ್ತಷ್ಟು
ಮಾ.17ರಂದು ಸಂಸದೀಯ ಸಭೆಗೆ ಮುಶ್ ಕರೆ
ಪಾಕ್: ಸರಣಿ ಸ್ಫೋಟ, 23 ಸಾವು
ಶ್ರೀಲಂಕಾ: ಕರುಣಾ ಪಡೆ ಗೆಲುವು
ನಕ್ಕು ನಕ್ಕೇ ಮದುವೆಯಾದರು!
ಲಾಹೋರ್: ಪೊಲೀಸ್ ಕಚೇರಿಯಲ್ಲಿ ಸ್ಫೋಟ
ಶ್ರೀಲಂಕಾ: ಘರ್ಷಣೆಯಲ್ಲಿ 32 ಮಂದಿ ಸಾವು