ಡೆಮಾಕ್ರೆಟಿಕ್ ಅಭ್ಯರ್ಥಿ ಬಾರಕ್ ಒಬಾಮ, ಮಿಸ್ಸಿಸಿಪ್ಪಿಯಲ್ಲಿ ನಡೆದ ಡೆಮಾಕ್ರೆಟಿಕ್ ಪ್ರಾಥಮಿಕ ಚುನಾವಣೆಯಲ್ಲಿ ಜಯಭೇರಿ ಹೊಡೆದಿದ್ದಾರೆ. ಒಬಾಮ ಅವರು ಶೇ.90 ರಷ್ಟು ನೀಗ್ರೋ ಮತಗಳನ್ನು ಗಳಿಸಲು ಶಕ್ತವಾಗಿದ್ದರೆ, ಕೇವಲ ಮೂರನೆ ಒಂದರಷ್ಟು ಮಾತ್ರ ಬಿಳಿಯರ ಮತಗಳಿಸಲು ಶಕ್ತವಾಗಿದ್ದಾರೆ.
ಆದರೆ 33 ಪ್ರತಿನಿಧಿಗಳ ಈ ಮಿಸ್ಸಿಸಿಪ್ಪಿ ಫಲಿತಾಂಶವು ಅಧ್ಯಕ್ಷೀಯ ಚುನಾವಣೆಯ ಸ್ಫರ್ಧೆಯ ಸ್ವರೂಪವನ್ನು ಬದಲಿಸಿಲ್ಲ. ಒಬಾಮ ಹಾಗೂ ಇನ್ನೋರ್ವ ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಅಧ್ಯಕ್ಷೀಯ ಅಭ್ಯರ್ಥಿತನದ ಓಟ ಮುಂದುವರಿದಿದೆ.
ಚುನಾವಣಾ ಓಟದ ಮುಂದಿನ ತಾಣ ಪೆನ್ಸಿಲ್ವೇನಿಯಾ. ಇಲ್ಲಿ ಎಪ್ರಿಲ್ 22ರಂದು ಚುನಾವಣೆ ನಡೆಯಲಿದೆ.
|