ಅನಾರೋಗ್ಯ ಪೀಡಿತರಾಗಿರುವ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರನ್ನು ಅಸ್ಪತ್ರೆಗೆ ದಾಖಲು ಮಾಡಾಗಿದೆ.
ಭ್ರಷ್ಟಾಚಾರ ಆರೋಪದಲ್ಲಿ ಕಳೆದ ಎಂಟು ತಿಂಗಳಿಂದ ಬಂಧನದಲ್ಲಿರುವ ಹಸೀನಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿದೇಶಿ ಚಿಕಿತ್ಸೆಯ ಶಿಫಾರಸು ಮಾಡಿರುವ ಬಳಿಕ, ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.
ಹಸೀನಾ ಅವರು ರಕ್ತದೊತ್ತಡ, ಕಣ್ಣು, ಕಿವಿ ಹಾಗೂ ಕಾರ್ಡಿಯಾಕ್ ಸಮಸ್ಯೆಯಿಂದ ಬಳಲುತ್ತಿದ್ದು ಇವರನ್ನು ಮಂಗಳವಾರ ಸ್ಕ್ವೇರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದ ವರದಿ ತಿಳಿಸಿದೆ.
ಹಸೀನಾ ಅವರು ಸಂಪೂರ್ಣ ಕಿವುಡಾಗುವ ಅಪಾಯವಿರುವ ಕಾರಣ ಅವರನ್ನು ಚಿಕಿತ್ಸೆಗಾಗಿ ಅಮೆರಿಕಕ್ಕೆ ಕಳುಹಿಸುವುದು ಒಳಿತು ಎಂದು ಅವರನ್ನು ಪರೀಕ್ಷಿಸಿರುವ ವೈದ್ಯರು ಶಿಫಾರಸು ಮಾಡಿದ್ದಾರೆ.
2004ರಲ್ಲಿ ನಡೆಸಿದ ಗ್ರೆನೇಡ್ ದಾಳಿಯಲ್ಲಿ ಹಸೀನಾ ಅವರ ಕಿವಿಗೆ ಗಾಯವಾಗಿತ್ತು.
|